ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಇಬ್ಬರು ಇನ್ಸ್ಪೆಕ್ಟರ್ ಗಳ ಕೊಲ್ಡ್ ವಾರ್ ಇಂದಾಗಿ ಓರ್ವ ಪೇದೆ ಅಮಾನತ್ತಾದ ಘಟನೆ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನಡೆದಿದೆ. ಜಿಲ್ಲೆಯ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ರಮೇಶ್ ಎಂಬುವವರನ್ನ ಅಮಾನತ್ತು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
* ಟಿ.ನರಸೀಪುರದ ಕಡೆಯಿಂದ ಮೂಗೂರು, ಬಾಣಹಳ್ಳಿ ಮಾರ್ಗವಾಗಿ ತಮಿಳುನಾಡಿನ ಖಾಸಯಿಖಾನೆ ಕಡೆಗೆ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಎರಡು ಈಚರ್ ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿದ ಕುದೇರು ಠಾಣೆಯ ಸಬ್ ಇನ್ಸ್ಪೆಕ್ಟರ್ ಹನುಮಂತ ಉಪ್ಪಾರ್ ಅವರು ಆ.19 ರಂದು ಬೆಳಗಿನ ಜಾವ ದಾಳಿ ನಡೆಸಿ ಎರಡು ವಾಹನಗಳು, ನಾಲ್ಕು ಆರೋಪಿಗಳು ಹಾಗೂ 48 ಜಾನುವಾರುಗಳನ್ನು ವಶಕ್ಕೆ ಪಡೆದು ಸಂತೇಮರಹಳ್ಳಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುತ್ತಾರೆ. ಈ ಪ್ರಕರಣ ದಾಖಲಾದ ದಿನ ಸಂತೇಮರಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ತಾಜುದ್ದೀನ್ ಹೊರ ರಾಜ್ಯಕ್ಕೆ ಕರ್ತವ್ಯದ ನಿಮಿತ್ತ ತೆರಳಿದ್ದರು ಎಂದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅಲ್ಲಿನ ವಿಶೇಷ ವಿಭಾಗದ ಪೊಲೀಸ್ ಪೇದೆ ವೈಫಲ್ಯದಿಂದ ಈ ಘಟನೆ ಜರುಗಿದೆ ಎಂದು ಕಾನ್ಸ್ ಟೇಬಲ್ ರಮೇಶ್ ಎಂಬುವವರನ್ನು ಅಮಾನತ್ತು ಮಾಡಿದ್ದಾರೆ. ಈ ಪೇದೆಯ ಅಮಾನತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿರುವುದು ಮಾತ್ರ ಗಮನಾರ್ಹ ಎಂದರೂ ತಪ್ಪಾಗುವುದಿಲ್ಲ.
ಇದರಿಂದಾಗಿ ಅಂದು ರಾತ್ರಿ ಗಸ್ತಿನಲ್ಲಿದ್ದ ಕುದೇರು ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಸಂತೇಮರಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಳ ನಡುವೆ ಪ್ರಾರಂಭವಾದ ಶೀತಲಸಮರದಿಂದಾಗಿ ಅಮಾಯಕ ಪೊಲೀಸ್ ಪೇದೆಯ ಅಮಾನತ್ತು ಮಾಡಿದ್ದಾರೆ ಎಂದು ತಿಳಿದುಬಂದಿದೆ. ದನಸಾಗಾಣಿಕೆ ಪ್ರಕರಣ ಗಮನಿಸುವುದೇ ಆದರೆ ಈ ಹಿಂದೆಯೂ ಸಹ ಇದೆ ದಾರಿಯಲ್ಲಿ ನಿರಂತರವಾಗಿ ಜಾನುವಾರುಗಳ ಸಾಗಾಣಿಕೆ ನಡೆಯುತ್ತಿದ್ದು ಕಂಡುಬಂದಿದೆ. ಸಂತೆಮರಳ್ಳಿ ಠಾಣೆಗೆ ಸಂಬಂದಿಸಿದ ದನಸಾಗಾಣಿಕೆ ಮಾಹಿತಿಗಳೆಲ್ಲವೂ ಹಿರಿಯ ಅದಿಕಾರಿಗಳಿಗೆ ಗೊತ್ತಿದ್ದರೂ ಮೌನ ವಹಿಸಿದ್ದು ಈಗ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣದಲ್ಲಿ ತೀವ್ರ ವಿಚಾರಣೆ ಮಾಡಿ ತಪ್ಪಿತಸ್ಥರೆನ್ನಲಾದ ಇನ್ಸ್ ಪೆಕ್ಟರ್ ಗಳ ಮೇಲೆ ಕ್ರಮ ಜರುಗಿಸಬೇಕಾದ ಪೊಲೀಸ್ ವರೀಷ್ಟಾದಿಕಾರಿಗಳು ಕೆಲವರಿಗೆ ಮೆಮೊ ಕೊಟ್ಟಿದ್ದಾರೆ ಎಂದು ತಿಳಿದುಬಂದಿದ್ದು ಪೇದೆಗೆ ಅಮಾನತ್ತಿನ ಪತ್ರವನ್ನೆ ನೀಡಿ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಪೇದೆಗೂ ಮೆಮೊ ಕೊಡಬಹುದಿತ್ತು..ಆದರೆ ಏಕಾಏಕಿ ಅಮಾನತು ಮಾಡಿ ಠಾಣೆಯ ಮೇಲಾದಿಗಳ ರಕ್ಣಣೆಗೆ ಎಸ್ಪಿ ಅವರೂ ಟೊಂಕಕಟ್ಟಿ ನಿಂತಿರುವುದು ಸಾಕಷ್ಟು ಅನುಮಾನಗಳು ಮೂಡಿದರೂ ಇದು ಒಂದು ಅಂತ್ಯ ಕಾಣಬೇಕಾದರೆ ಐಜಿಪಿ ಅವರ ವಿಶೇಷ ತನಿಖಾ ತಂಡದಿಂದಲೋ ಅಥವಾ ಎಡಿಜಿಪಿ ಅಲೋಕ್ ಕುಮಾರ್ ಅವರೆ ಒಂದು ತಂಡ ರಚಿಸಿದರೆ ವಿಶೇಷ ತನಿಖೆ ನಡೆಸಿ ಮತ್ತಷ್ಟು ದನಗಳ್ಳರು , ಇಲಾಖೆ ಸಾಮಾನ್ಯ ಕಳ್ಳರು ಹೊರಬರದೆ ಇರಲಾರದು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.