ರೋಹ್ಟಕ್ (ಹರಿಯಾಣ): ಕಾಮನ್ವೆಲ್ತ್ ಗೇಮ್ಸ್(Commonwealth Games) ಕಂಚಿನ ಪದಕ ವಿಜೇತೆ ಪೂಜಾ ಸಿಹಾಗ್(Pooja Sihag) ಅವರ ಪತಿ ʻಅಜಯ್ ನಂದಲ್ʼ ಶನಿವಾರ ತಡರಾತ್ರಿ ಹರಿಯಾಣದ ರೋಹ್ಟಕ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ರೋಹ್ಟಕ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಮಹೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಹರಿಯಾಣದ ರೋಹ್ಟಕ್ನ ಗರ್ಹಿ ಬೋಹಾರ್ ಗ್ರಾಮದ ನಿವಾಸಿ ಹಾಗೂ ಪೂಜಾ ಸಿಹಾಗ್ ಪತಿ ಅಜಯ್ ನಂದಲ್ ಸಾವಿನ ಸುದ್ದಿ ನಮಗೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಬಂದಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ, ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಕಳುಹಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಘಟನೆ ನಡೆದಾಗ ಜಾಟ್ ಕಾಲೇಜಿನ ಬಳಿ ಕೆಲವರು ಮದ್ಯ ಸೇವಿಸಿದ್ದರು ಎನ್ನಲಾಗಿದೆ ಎಂದು ತಿಳಿಸಿದ್ದಾರೆ.
2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಆಸ್ಟ್ರೇಲಿಯಾದ ನವೋಮಿ ಡಿ ಬ್ರೂಯಿನ್ ವಿರುದ್ಧ ಪ್ರಬಲ ಪ್ರದರ್ಶನ ನೀಡಿದ ನಂತರ ಭಾರತದ ಕುಸ್ತಿಪಟು ಪೂಜಾ ಸಿಹಾಗ್ ಮಹಿಳೆಯರ ಫ್ರೀಸ್ಟೈಲ್ 76 ಕೆಜಿ ವಿಭಾಗದ ಫೈನಲ್ನಲ್ಲಿ ಕಂಚಿನ ಪದಕವನ್ನು ಗೆದ್ದರು.
BREAKING NEWS : ರಾಜ್ಯಾದ್ಯಂತ ಮುಂದುವರೆದ ಮಳೆಯ ಅಬ್ಬರ : ಹಲವೆಡೆ ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ