ದೆಹಲಿ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್(Sonali Phogat) ಗೋವಾದ ನೈಟ್ಕ್ಲಬ್ಗೆ ಭೇಟಿ ನೀಡಿದ ಒಂದು ದಿನದ ನಂತ್ರ ಸಾವಿಗೀಡಾದರು. ಆದ್ರೆ, ಆ ದಿನ ನೈಟ್ಕ್ಲಬ್ನಲ್ಲಿ ನಡೆದಿದ್ದೇನು ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಕ್ಲಬ್ನಲ್ಲಿ ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸುತ್ತಿರುವ ದೃಶ್ಯವೊಂದು ಹೊರಬಿದ್ದಿದೆ. ಇದು ನಡೆದ ಒಂದು ದಿನದ ನಂತ್ರ ಸೋನಾಲಿ ಸಾವನ್ನಪ್ಪಿದ್ದರು. ವಿಡಿಯೋದಲ್ಲಿ ಕಂಡುಬಂದ ವ್ಯಕ್ತಿಯನ್ನು ಸುಧೀರ್ ಸಾಂಗ್ವಾನ್ ಎಂಬಂತೆ ತೋರುತ್ತಿದೆ ಎನ್ನಲಾಗಿದೆ.
सोनाली फोगाट और सुधीर का दूसरा CCTV.. ड्रग्स देने वाला वीडियो !#SonaliPhogatDeathMystery #SonaliPhogat #sonaliphogatcctv pic.twitter.com/DRs4ctApl4
— Sarv Mitter kamboj (@sarv_mitter) August 27, 2022
ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಬಂಧಿಸಿರುವ ಆಕೆಯ ಇಬ್ಬರು ಸಹಚರರಲ್ಲಿ ಒಬ್ಬರು ಈ ಸುಧೀರ್. ಸುಧೀರ್ ಅವರು ನಿನ್ನ ವೈರಲ್ ಆಗಿದ್ದ ವಿಡಿಯೋದಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸೋನಾಲಿ ಅವರನ್ನು ಹಿಡಿದುಕೊಂಡು ಕ್ಲಬ್ ಕರ್ಲೀಸ್ನಿಂದ ಹೊರಬರಲು ಸಹಾಯ ಮಾಡುತ್ತಿರುವುದು ಕಂಡುಬಂದಿತ್ತು.
ಸುಧೀರ್ ಸಾಂಗ್ವಾನ್ ಸೋನಾಲಿ ಫೋಗಟ್ಗೆ ಬಲವಂತವಾಗಿ ಕೆಲವು ದ್ರವ್ಯಗಳನ್ನು ಕುಡಿಸುತ್ತಿರುವ ದೃಶ್ಯಗಳು ತಮ್ಮ ಬಳಿ ಇವೆ ಎಂದು ಪೊಲೀಸರು ಈ ಕ್ಲಿಪ್ ಅನ್ನು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ಸಹಚರರು ಅವಳನ್ನು ಸಾಯುವ ಮೊದಲು ಅವರೆಲ್ಲರೂ ತಂಗಿದ್ದ ಗ್ರ್ಯಾಂಡ್ ಲಿಯೋನಿ ಎಂಬ ಹೋಟೆಲ್ಗೆ ಕರೆದೊಯ್ದರು. ಮರುದಿನ ಬೆಳಿಗ್ಗೆ ಉತ್ತರ ಗೋವಾದ ಅಂಜುನಾದಲ್ಲಿರುವ ಆಸ್ಪತ್ರೆಗೆ ಕರೆತಂದಾಗ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆದರೆ, ಆಕೆಯ ಕುಟುಂಬವು ಆಕೆಯ ಸಾವಿನ ಬಗ್ಗೆ ಅನುಮಾನಗೊಂಡು ತನಿಖೆಗೆ ಆಗ್ರಹಿಸಿದ್ದು, ಇದೀಗ ಒಂದೊಂದೇ ವಿಷಯಗಳು ಹೊರಬೀಳುತ್ತಿವೆ.
BIGG NEWS : ರೈತ ಸಮುದಾಯಕ್ಕೆ ಸಿಹಿಸುದ್ದಿ : ಶೀಘ್ರವೇ ಡೀಸೆಲ್ ಗೆ ಸಬ್ಸಿಡಿ ನೀಡುವ `ರೈತ ಶಕ್ತಿ’ ಯೋಜನೆಗೆ ಚಾಲನೆ
BIG NEWS: 2027 ರವರೆಗೆ ʻಐಸಿಸಿ ಮಾಧ್ಯಮ ಹಕ್ಕುʼ ಪಡೆದ ʻಡಿಸ್ನಿ ಸ್ಟಾರ್ʼ – ICC ಘೋಷಣೆ | ICC media rights