ರಾಜಸ್ಥಾನ : ಮತದಾನ ಹತ್ತಿವಾಗುತ್ತಿದ್ದಂತೆ ರಾಜಕಾರಣಿಗಳು ನಾಚಿಕೆ ಬಿಟ್ಟು ಮತ ಹಾಕೋದಕ್ಕೆ ಕೇಳುತ್ತಾರೆ. ಗೆದ್ದ ಮೇಲೆ ಹಲವು ಮುಖಂಡರು ಅತ್ತ ಸುಳಿಯದೇ ಇರುವುದು ಹೊಸ ವಿಷಯವೇನಲ್ಲ. ಅಂತಹದ್ದೇ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ
ಇಲ್ಲೊಬ್ಬ ಯುವಕ, ಯುವತಿಯನ್ನು ಅಡ್ಡಗಟ್ಟಿ ಅವರ ಕಾಲಿಗೆ ಬೀಳುತ್ತಿರುವ ಯುವಕರನ್ನು ಒಮ್ಮೆ ನೀವೆ ನೋಡಿ ಈ ಕೆಳಗಿರುವ ವಿಡಿಯೋದಲ್ಲಿ ನೋಡಿ.
राजस्थान विश्वविद्यालय छात्र संघ चुनाव के दौरान प्रत्याशियों ने सड़क पर लेटकर पैर पकड़कर माँगे वोट. pic.twitter.com/rmvlgCFXgJ
— UnSeen India (@USIndia_) August 26, 2022
ಛೇ ಹೀಗೆಲ್ಲಾ ಮಾಡಬೇಡಿ ಎಂದು ಯುವತಿಯರು ನಾಚಿ ನೀರಾದರೂ ಬಿಡದ ಯುವಕರು ಅವರ ಕಾಲಿಗೆ ಬಿದ್ದು ನಮಗೇ ವೋಟು ಕೊಡಿ ಎಂದು ಕೇಳುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅಂದ ಹಾಗೆ, ಈ ವಿಡಿಯೋ ರಾಜಸ್ಥಾನದ ಬರಾನ್ದು. ಹೀಗೆ ಕಾಲೇಜಿನ ಯುವಕ, ಯುವತಿಯನ್ನು ಅಡ್ಡಗಟ್ಟಿ ಅವರ ಕಾಲಿಗೆ ಬಿದ್ದು ಅಂಗಲಾಚುತ್ತಿರುವವರು ವಿದ್ಯಾರ್ಥಿ ಸಂಘದ ಯುವಕರು! ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಇದಾಗಿದೆ.
ಅಂದಹಾಗೆ ಸಂಘದ ಚುನಾವಣೆ ನಿನ್ನೆ (ಶುಕ್ರವಾರ) ನಡೆದಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿತ್ತು. ಇಂದು (ಶನಿವಾರ) ಮತ ಎಣಿಕೆ ನಡೆಯುತ್ತಿದ್ದು, ಸಂಜೆಯ ವೇಳೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಮತ ಚಲಾಯಿಸಲು ಯುವಕರು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ