ಬೆಂಗಳೂರು : ಶಾಲಾ ಪಠ್ಯ ಪರಿಷ್ಕರಣೆ ವಿವಾದದ ಬೆನ್ನಲ್ಲೇ ವಿ.ಡಿ.ಸಾವರ್ಕರ್ ಕುರಿತ 8ನೇ ತರಗತಿಯ ಕನ್ನಡ (ದ್ವಿತೀಯ ಭಾಷೆ) ಪಠ್ಯಪುಸ್ತಕದ ಒಂದು ಪ್ಯಾರಾಗ್ರಾಫ್ ನಲ್ಲಿ ದೇಶಭಕ್ತಿ ವರ್ಣಿಸುವ ಭರದಲ್ಲಿ ಉತ್ಪ್ರೇಕ್ಷೆಯ ಸಾಲುಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಬಾಯ್ಫ್ರೆಂಡ್ಗಾಗಿ ಮಾರಾಮಾರಿ: ಠಾಣೆ ಮೆಟ್ಟಿಲೇರಿದ ಹುಡುಗಿಯರು, ಯುವಕ ಎಸ್ಕೇಪ್!
ರೋಹಿತ್ ಚಕ್ರತೀರ್ಥರ ನೇತೃತ್ವದ ಸಮಿತಿಯು ಈ ಪಠ್ಯಪುಸ್ತಕವನ್ನು ಪರಿಷ್ಕರಿಸಿದೆ. ವಿ.ಡಿ. ಸಾವರ್ಕರ್ ಅವರನ್ನು ಬ್ರಿಟಿಷರು ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್ ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ರೆಕ್ಕೆಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು ಎಂಬ ಉತ್ಪ್ರೇಕ್ಷೆಯ ಸಾಲುಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ.
BIGG NEWS : ರಾಜ್ಯದಲ್ಲಿ ಆಗಸ್ಟ್ 29 ರಿಂದ `ಗ್ರಾಮೀಣ ಕ್ರೀಡಾಕೂಟ’ : ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
8 ನೇ ತರಗತಿ ಕನ್ನಡ ಪಠ್ಯದಲ್ಲಿ ಈ ಮೊದಲು ಇದ್ದ ವಿಜಯಮಾಲಾ ರಂಗನಾಥ ಅವರ ಬ್ಲಡ್ ಗ್ರೂಪ್ ಎಂಬ ಪಾಠವನ್ನು ಕೈಬಿಡಲಾಗಿದ್ದು, ಇದರ ಬದಲು ಕೆ.ಟಿ.ಗಟ್ಟಿ ಅವರು ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ್ದರ ಬಗ್ಗೆ ಬರೆದಿರುಉವ ಪ್ರವಾಸ ಕಥನ ಆಧಾರಿತ ಕಾಲವನ್ನು ಗೆದ್ದವರು ಪಾಠವನ್ನು ಸೇರಿಸಲಾಗಿದೆ. ಈ ಪಾಠದ ಪುಟಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಾವರ್ಕರ್ ಅವರು ಬುಲ್ ಬುಲ್ ಹಕ್ಕಿಗಳ ರೆಕ್ಕೆಯ ಮೇಲೆ ಕುಳಿದು ಜೈಲಿನಿಂದ ಹೊರಗೆ ಹೋಗಿ ತಾಯ್ನಾಡ ನೆಲವನ್ನು ಸ್ಪರ್ಶಿಸಿ ಬರುತ್ತಿದ್ದರು ಎಂದು ಲೇಖಕರು ಕಾವ್ಯಾತ್ಮಕವಾಗಿ ಹೇಳಿದ್ದಾರೆ.”ಸಾವರ್ಕರ್ ಅವರನ್ನು ಇರಿಸಲಾಗಿದ್ದ ಜೈಲಿನ ಕೋಣೆಯಲ್ಲಿ ಒಂದು ಪ್ರಮುಖ ರಂಧ್ರವೂ ಇರಲಿಲ್ಲ. ಆದರೆ, ಎಲ್ಲಿಂದಲೋ ಬುಲ್ ಬುಲ್ ಹಕ್ಕಿಗಳು ಕೊಠಡಿಗೆ ಭೇಟಿ ನೀಡುತ್ತಿದ್ದವು ಮತ್ತು ಸಾವರ್ಕರ್ ಬುಲ್ ಬುಲ್ ಹಕ್ಕಿಗಳ ರೆಕ್ಕೆಗಳ ಮೇಲೆ ಕುಳಿತು ಪ್ರತಿದಿನ ತಾಯ್ನಾಡಿಗೆ ಭೇಟಿ ನೀಡಿ ಬರುತ್ತಿದ್ದರು ಎಂದು ಬರೆಯಲಾಗಿದೆ.