ನವದೆಹಲಿ : ವಿಶ್ವ ಫುಟ್ಬಾಲ್ ಆಡಳಿತ ಮಂಡಳಿಯಾದ ಫಿಫಾ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಮೇಲಿನ ನಿಷೇಧವನ್ನ ಶುಕ್ರವಾರ ತೆರವುಗೊಳಿಸಿದೆ. ಈ ಮೂಲಕ ಭಾರತ ಅಕ್ಟೋಬರ್ನಲ್ಲಿ ನಡೆಯಲಿರುವ ಅಂಡರ್ -17 ಮಹಿಳಾ ವಿಶ್ವಕಪ್ 2022ಕ್ಕೆ ಆತಿಥೇಯರಾಗಿ ಉಳಿಯಲಿದೆ.
“ಅನಗತ್ಯ ಮೂರನೇ ವ್ಯಕ್ತಿಯ ಪ್ರಭಾವದಿಂದಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಮೇಲೆ ವಿಧಿಸಲಾಗಿದ್ದ ಅಮಾನತನ್ನ ತೆಗೆದುಹಾಕಲು ಫಿಫಾ ಕೌನ್ಸಿಲ್ ಬ್ಯೂರೋ ನಿರ್ಧರಿಸಿದೆ” ಎಂದು ಫಿಫಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
FIFA lifts AIFF ban, India to host U-17 Women's World Cup 2022
Read @ANI Story | https://t.co/ACWqm7JvmH#FIFA #AIFF #U17WomensWorldCup2022 #India pic.twitter.com/cRjBQffOYL
— ANI Digital (@ani_digital) August 26, 2022
ಎಐಎಫ್ಎಫ್ ಕಾರ್ಯಕಾರಿ ಸಮಿತಿಯ ಅಧಿಕಾರವನ್ನು ವಹಿಸಿಕೊಳ್ಳಲು ರಚಿಸಲಾಗಿದ್ದ ಆಡಳಿತಗಾರರ ಸಮಿತಿಯ ಆದೇಶವನ್ನ ರದ್ದುಪಡಿಸಲಾಗಿದೆ. ಇನ್ನು ಎಐಎಫ್ಎಫ್ ಆಡಳಿತವು ಎಐಎಫ್ಎಫ್ನ ದೈನಂದಿನ ವ್ಯವಹಾರಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನ ಮರಳಿ ಪಡೆದುಕೊಂಡಿದೆ ಎಂಬ ದೃಢೀಕರಣವನ್ನು ಫಿಫಾ ಪಡೆದ ನಂತ್ರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.