ದುಬೈ : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸುಮಾರು ಒಂದು ತಿಂಗಳ ವಿರಾಮದ ನಂತರ ಕ್ರಿಕೆಟ್ಗೆ ಮರಳಲಿದ್ದಾರೆ. ಆಗಸ್ಟ್ 28ರ ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ 2022ರ ಪಂದ್ಯದಲ್ಲಿ ಭಾರತದ ಲೆಜೆಂಡರಿ ಬ್ಯಾಟ್ಸ್ಮನ್ ತಮ್ಮ ಪುನರಾಗಮನ ಮಾಡಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಕದನಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಾಕಂದ್ರೆ, ಅವ್ರು ತಮ್ಮ ನೆಚ್ಚಿನ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ಗೆ ಮರಳಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದಾರೆ.
ಬ್ಯಾಕ್-ಟು-ಬ್ಯಾಕ್ ವೈಫಲ್ಯಗಳ ನಂತ್ರ ಸ್ಟಾರ್ ಬ್ಯಾಟ್ಸ್ಮ್ಯಾನ್ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ನ ಭಾರತದ ಪ್ರವಾಸವನ್ನ ತಪ್ಪಿಸಿಕೊಂಡರು. 2022ರ ಏಪ್ರಿಲ್ನಿಂದ ಎಲ್ಲಾ ಸ್ವರೂಪಗಳಲ್ಲಿ 22 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಂತ್ರಿಕ ಕೇವಲ ಒಂದು ಅರ್ಧಶತಕವನ್ನ ಮಾತ್ರ ಗಳಿಸಿದ್ದಾರೆ, ಇದು ಟಿ20 ವಿಶ್ವಕಪ್ 2022ಕ್ಕೆ ಮುಂಚಿತವಾಗಿ ಹೆಚ್ಚು ಕಳವಳಕಾರಿಯಾಗಿದೆ.
ಏತನ್ಮಧ್ಯೆ, ವಿರಾಟ್ ಫಾರ್ಮ್ಗೆ ಮರಳುವುದು ಎಷ್ಟು ಮುಖ್ಯ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
“ಅವರು ಕೇವಲ ಭಾರತಕ್ಕಾಗಿ ಮಾತ್ರವಲ್ಲದೇ ತಮಗಾಗಿ ರನ್ ಗಳಿಸಬೇಕಾಗಿದೆ. ಇದು ಅವ್ರಿಗೆ ಉತ್ತಮ ಋತುವಾಗಲಿದೆ ಎಂದು ಆಶಿಸುತ್ತೇನೆ. ಅವರು ಮರಳಿ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ಗಂಗೂಲಿ ಹೇಳಿದ್ದಾರೆ.
“ನಾವೆಲ್ಲರೂ ಅವ್ರು ಆ ಶತಕವನ್ನ ಗಳಿಸಲು ಕಾಯುತ್ತಿದ್ದೇವೆ. ನನಗೆ ಖಾತ್ರಿಯಿದೆ ಅದು ಸಾಧ್ಯವಾಗುತ್ತೆ, ಅವರು ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಗಂಗೂಲಿ ಹೇಳಿದರು.
“ಸಮಯದಿಂದಾಗಿ ಟಿ20ಯಲ್ಲಿ ಶತಕ ಗಳಿಸುವ ಸಾಧ್ಯತೆಗಳು ಕಡಿಮೆ. ಆದ್ರೆ, ಕೊಹ್ಲಿಗೆ ಇದು ದೊಡ್ಡ ಋತುವಾಗಲಿದೆ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ. ಜೂನ್-ಜುಲೈನಲ್ಲಿ ಇಂಗ್ಲೆಂಡ್ನಲ್ಲಿ ಕೊನೆಯ ಬಾರಿಗೆ ಆಕ್ಷನ್ನಲ್ಲಿ ಕಾಣಿಸಿಕೊಂಡ 33 ವರ್ಷದ ಭಾರತದ ಮಾಜಿ ನಾಯಕ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯಲ್ಲಿ ಎರಡು ವೈಟ್-ಬಾಲ್ ಸರಣಿಗಳನ್ನ ತ್ಯಜಿಸಿದ ಒಂದು ತಿಂಗಳ ವಿರಾಮದ ನಂತರ ಮರಳಿದ್ದಾರೆ.
“ಅವರು ಬಹಳ ದೊಡ್ಡ ಆಟಗಾರ, ಅಲ್ಲಿ ಬಹಳ ಸಮಯದಿಂದ ಇದ್ದಾರೆ. ಅವರು ರನ್ ಗಳಿಸಲು ತಮ್ಮದೇ ಆದ ಸೂತ್ರವನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ. ಅವರ ಎತ್ತರದ ಆಟಗಾರಾಗಿದ್ದು, ಖಂಡಿತವಾಗಿಯೂ ರನ್ ಗಳಿಸುತ್ತಾರೆ. ಇನ್ನು ಅವರು ಉತ್ತಮ ಆಟಗಾರನಲ್ಲದಿದ್ದರೆ, ಅವರು ಇಷ್ಟು ದೀರ್ಘಕಾಲದವರೆಗೆ ಇಷ್ಟೊಂದು ರನ್ ಗಳಿಸುತ್ತಿರಲಿಲ್ಲ” ಎಂದು ಗಂಗೂಲಿ ಹೇಳಿದರು.