ಬೆಂಗಳೂರು: ಬಿಡಿಎ ಆಯುಕ್ತರಾಗಿದ್ದ ಎಂ.ಬಿ.ರಾಜೇಶ ಗೌಡ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಅವರ ವರ್ಗಾವಣೆಯಾದ ಜಾಗಕ್ಕೆ ಕುಮಾರ್ ನಾಯ್ಕ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಆದೇಶ ಮಾಡಲಾಗಿದೆ.
ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ಬಿಡಿಎ ಅಧಿಕಾರಿಗಳ ಧೋರಣೆಗೆ ಸುಪ್ರಿಂಕೋರ್ಟ ಚಾಟಿ ಬೀಸಿತ್ತು, ಕೋರ್ಟ್ ಆದೇಶದ ಬಗ್ಗೆ ಅವಿಧೇಯತೆ ತೋರಿದ್ದಕ್ಕೆ ರಾಜೇಶ ಗೌಡ ಅವರನ್ನು ಪ್ರಾಧಿಕಾರದಿಂದ ವರ್ಗಾವಣೆ ಮಾಡಬೇಕು ಎಂದೂ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿತ್ತು. ಸುಪ್ರಿಂಕೋರ್ಟ್ ಆದೇಶದ ಬೆನ್ನಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಇಂಧನ ಇಲಾಖೆ ಸಿಎಎಸ್ ಆಗಿರುವ ಕುಮಾರ್ ನಾಯ್ಕ್ ಅವರಿಗೆ ರಾಜ್ಯ ಸರ್ಕಾರ ಹೆಚ್ಚುವರಿಯನ್ನ ಬಿಡಿಎ ಅನ್ನು ಆಗಿ ನೀಡಿ ಆದೇಶ ಹೊರಡಿಸಿದೆ.