ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ್ಸವಕ್ಕೆ ಅನುಮತಿ ನೀಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಇದೇ ವೇಳೇ ಅನುಮತಿ ಕೋರಿದ ಅರ್ಜಿಗಳನ್ನು ಪರಿಶೀಳನೆ ನಡೆಸಬಹುದು ಅಂತ ನ್ಯಾಯಾಪೀಠ ತಿಳಿಸಿದ್ದು, ಧಾರ್ಮಿಕ ಮತ್ತು ಸಾಂಸ್ಕ್ರುತಿಕ ಚುಟುವಟಿಕಗಳಿಗೆ ಅನುಮತಿ ನೀಡಬಹುದು ಅಂತ ನ್ಯಾಯಾಪೀಠ ಹೇಳಿದ್ದು, ಇದೇ ವೇಳೆ ಆಗಸ್ಟ್ 31ರಿಂದ ನಿರ್ದಿಷ್ಟ ಅವಧಿ ತನಕ ಸಂಬಂಧಪಟ್ಟ ಮೈದಾನದಲ್ಲಿ ಅವಕಾಶ ನೀಡಬಹುದು ಅಂತ ತಿಳಿಸಿದೆ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನಲ್ಲಿ ಗಣೇಶ ಚತುರ್ಥಿ ಆಚರಣೆ ಸಂಬಂಧ ಹೈಕೋರ್ಟ್ ಗೆ ( Karnataka High Court ) ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕೋರ್ಟ್, ಅನುಮತಿಸುವಂತೆ ಕೋರಿ ಸಲ್ಲಿಸಲಾಗಿರುವಂತ ಅರ್ಜಿಯನ್ನು ಪರಿಶೀಲಿಸಿ ಅನುಮತಿ ನೀಡಬಹುದು ಎಂಬುದಾಗಿ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿ ಆದೇಶಿಸಿದೆ.
ಅಲ್ಲದೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ನೀಡಬಹುದಾಗಿ ಎಂದು ತಿಳಿಸಿದೆ. ಅಲ್ಲದೇ ಆಗಸ್ಟ್ 31ರಿಂದ ನಿರ್ಧಿಷ್ಟ ಅವಧಿಗೆ ಮಾತ್ರವೇ ಅನುಮತಿಯನ್ನು ನೀಡಿದೆ. ಈ ಮೂಲಕ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ನೀಡಿದೆ.