ಕೆಎನ್ಎನ್ಡಿಜಿಟಲ್ ಡೆಸ್ಕ್ : ಉತ್ತರ ಪ್ರದೇಶದ ಮೌ ಜಿಲ್ಲೆಯಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೋಪಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಸರತ್ಪುರ ಗ್ರಾಮದಲ್ಲಿ ಪತ್ನಿಯ ದಿನನಿತ್ಯದ ಜಗಳದಿಂದ ನೊಂದ ರಾಮ ಪ್ರವೇಶ್ ಎನ್ನುವ ಯುವಕನೊಬ್ಬ 100 ಅಡಿ ಎತ್ತರದ ತೆಂಗಿನ ಮರವನ್ನ ಹತ್ತಿ ಕುಳಿತಿದ್ದಾನೆ. ಅಚ್ಚರಿಯೆಂದ್ರೆ, ಮರ ಹತ್ತಿ ಕುಳಿತು ಒಂದು ತಿಂಗಳಾದ್ರೂ ಯುವಕ ಕೆಳಗಿಳಿಯುವ ಮನಸ್ಸು ಮಾಡ್ತಿಲ್ಲ. ಇನ್ನು ಗ್ರಾಮಸ್ಥರು ಮತ್ತು ಸಂಬಂಧಿಕರು ಅತನನ್ನ ಕೆಳಗಿಳಿಸಲು ಪ್ರಯತ್ನಿಸ್ತಿದ್ರೂ, ಅದು ಆಗ್ತಿಲ್ಲ. ಬದಲಾಗಿ ಮನವೋಲಿಸಲು ಬಂದ ಜನರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡುತ್ತಿದ್ದಾನೆ.
ಇನ್ನು ಮಾಹಿತಿ ಪಡೆದ ಪೊಲೀಸರು ಯುವಕನನ್ನ ಕೆಳಗಿಳಿಸಲು ಮುಂದಾದರಾದ್ರೂ ಆತ ಕೆಳಗೆ ಇಳಿಯಲು ನಿರಾಕರಿಸುತ್ತಿದ್ದಾನೆ. ಕೊನೆಗೆ ಪೊಲೀಸರೂ ಕೆಲಹೊತ್ತು ಗಲಾಟೆ ಮಾಡಿ ಅಲ್ಲಿಂದ ತೆರಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಯುವಕನ ತಂದೆ ಬಿಷ್ಣೂರಾಂ, “ಮನೆಯಲ್ಲಿ ಪ್ರತಿದಿನ ಅತ್ತೆ-ಸೊಸೆ ಜಗಳವಾಡುತ್ತಾರೆ. ಈ ಜಗಳ ಹಲವು ಬಾರಿ ಹೊಡೆದಾಟದವರೆಗೂ ತಲುಪಿತ್ತು. ಇದರಿಂದ ವಿಚಲಿತರಾದ ಅವರ ಮಗ ರಾಮ್ ಪ್ರವೇಶ್ ತಿಂಗಳ ಹಿಂದೆ ಪಕ್ಕದ ತೆಂಗಿನ ಮರ ಹತ್ತಿದ್ದಾನೆ” ಎಂದರು.
ಇನ್ನು ಈ ಯುವಕ ನಿತ್ಯದ ಕೆಲಸಕ್ಕೆ ಮಾತ್ರ ತಡರಾತ್ರಿ ಕೆಳಗೆ ಬಂದು ನಂತ್ರ ತನ್ನ ಚೀಲದಲ್ಲಿ ಕೆಲವು ಇಟ್ಟಿಗೆ ಮತ್ತು ಕಲ್ಲುಗಳನ್ನ ಸಂಗ್ರಹಿಸಿ ಮತ್ತೆ ಮರ ಹತ್ತುತ್ತಾನಂತೆ.
ಮರದ ಮೇಲೆ ಕುಳಿತೇ ಊಟ
ಯುವಕ ಮರದ ಮೇಲೆಯೇ ಕುಳಿತು ಆಹಾರ ತಿನ್ನುತ್ತಿದ್ದು, ಮನೆಯವರು ಸಮಯಕ್ಕೆ ಸರಿಯಾಗಿ ಊಟ-ನೀರು ತೆಗೆದುಕೊಂಡು ಮರಕ್ಕೆ ಹೋಗುತ್ತಾರೆ. ಆಗ ಆತ ಮೇಲಿನಿಂದ ಕೆಳಗೆ ಹಗ್ಗವನ್ನ ನೇತು ಬಿಟ್ಟು ಆಹಾರವನ್ನ ಮೇಲೆಕ್ಕೆ ಎಳೆದುಕೊಂಡು ಊಟ ಮಾಡ್ತಾನೆ. ಇನ್ನು ಒಂದು ತಿಂಗಳಿಂದ ರಾಮನ ದಿನಚರಿ ಇದೇ ಆಗಿದೆ. ಆತನನ್ನ ಯಾರಾದರೂ ಮನವೊಲಿಸಲು ಅಥವಾ ಕೆಳಗೆ ಬೀಳಿಸಲು ಪ್ರಯತ್ನಿಸಿದ್ರೆ ಆತ ಮರದ ಮೇಲೆ ಇಟ್ಟಿರುವ ಇಟ್ಟಿಗೆ ಕಲ್ಲುಗಳಿಂದ ದಾಳಿ ಮಾಡುತ್ತಾನೆ ಎಂದು ಸ್ಥಳೀಯರು ಹೇಳುತ್ತಾರೆ. ಇದರಿಂದ ಗ್ರಾಮದ ಯಾವೊಬ್ಬ ವ್ಯಕ್ತಿಯೂ ಆ ಮರದ ಬಳಿ ಹೋಗುತ್ತಿಲ್ಲ.
ಗ್ರಾಮದ ಮಹಿಳೆಯರ ಆಕ್ರೋಶ
ಗ್ರಾಮದೊಳಗೆ ತೆಂಗಿನ ಮರವಿರುವುದರಿಂದ ಬಹುತೇಕ ಎಲ್ಲ ಮನೆಗಳ ಅಂಗಳ ಮೇಲ್ನೋಟಕ್ಕೆ ಗೋಚರಿಸುತ್ತದೆ. ಮರದ ಎತ್ತರದಿಂದ ಮನೆಗಳ ಅಂಗಳದಲ್ಲಿ ನಡೆಯುವ ಮಹಿಳೆಯರ ಚಟುವಟಿಕೆಗಳನ್ನೂ ಯುವಕ ರಾಮ ನೋಡುತ್ತಾನೆ ಎಂದು ಗ್ರಾಮದ ಮಹಿಳೆಯರು ಆರೋಪಿಸುತ್ತಿದ್ದಾರೆ. ಇನ್ನೀದು ಮಹಿಳೆಯರನ್ನ ತುಂಬಾ ಕೆರಳಿಸಿದ್ದು, ಆತನ ಬಗ್ಗೆ ಗ್ರಾಮದ ಮುಖಂಡರಿಗೆ ಮಹಿಳೆಯರು ದೂರು ನೀಡಿದ್ದಾರೆ. ಕೂಡಲೇ ಮರದಿಂದ ತೆಳಗಿಳಿಸಬೇಕು ಎಂಬ ಆಗ್ರಹಿಸಿದ್ದಾರೆ.
ಪೊಲೀಸರು ಬಂದರು, ವಿಡಿಯೋ ಮಾಡಿಕೊಂಡು ಹೋದರು.!
ಗ್ರಾಮದ ಮುಖಂಡರ ಮಾಹಿತಿ ಮೇರೆಗೆ ಪೊಲೀಸರು ಕೂಡ ಆಗಮಿಸಿ ರಾಮ್ ಪ್ರವೇಶ್ʼನನ್ನ ಕೆಳಗಿಳಿಸಲು ಬಹಳ ಹೊತ್ತು ಯತ್ನಿಸಿದರಾದರೂ ಫಲಕಾರಿಯಾಗದೇ ಪೊಲೀಸರು ವಿಡಿಯೋ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಗಳು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದ ಮುಖ್ಯಸ್ಥರು ಹೇಳೋದೇನು.?
ರಾಮ್ ಪ್ರವೇಶ್ ಮತ್ತು ಅವರ ಕುಟುಂಬದ ನಡುವೆ ಮನಸ್ತಾಪವಿದೆ ಎಂದು ಬಸರತ್ಪುರ ಗ್ರಾಮದ ಮುಖಂಡ ದೀಪಕ್ ಹೇಳುತ್ತಾರೆ. ಇದರಿಂದಾಗಿ ಆತ ಸುಮಾರು 25 ದಿನಗಳಿಂದ ಮರದ ಮೇಲೆ ವಾಸಿಸುತ್ತಿದ್ದಾನೆ. ಈತ ಮರವನ್ನೇ ನಂಬಿ ಜೀವನ ನಡೆಸುತ್ತಿರುವುದರಿಂದ ಜನರ ಖಾಸಗಿತನಕ್ಕೆ ಧಕ್ಕೆಯಾಗುತ್ತಿದ್ದು, ಗ್ರಾಮದ ಮಧ್ಯೆ ತಾಳೆ ಮರವಿರುವುದರಿಂದ ಅನೇಕ ಮಹಿಳೆಯರು ಬಂದು ದೂರು ನೀಡಿದ್ದಾರೆ ಎಂದು ಹೇಳಿದರು.