ಮೈಸೂರು : ರಾಜ್ಯ ಸರ್ಕಾರದಲ್ಲಿ ಅವ್ಯಾಹತವಾಗಿ 40% ಪರ್ಸೆಂಟ್ ದಂಧೆ ನಡೆಯುತ್ತಿದೆ.ಯ ಸರ್ಕಾರ 40% ಕಮಿಷನ್ ದಂಧೆ ಬಗ್ಗೆ ಸಿಬಿಐಗೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
BIGG BREAKING NEWS : ಕಾಂಗ್ರೆಸ್ ಗೆ ಹಿರಿಯ ನಾಯಕ `ಗುಲಾಮ್ ನಬಿ ಅಜಾದ್’ ಗುಡ್ ಬೈ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬಿಬಿಎಂಪಿಯಲ್ಲಿ 50% ಕಮಿಷನ್ ದಂಧೆ ನಡೆಯುತ್ತಿದೆ ಎಂದು ನನ್ನನ್ನು ಭೇಟಿಯಾಗಿ ಗಮನಕ್ಕೆ ತಂದಿದ್ದಾರೆ. ಸುಮ್ಮನೆ ಯಾಕೆ ಆರೋಪ ಮಾಡುತ್ತೀರಿ, ದಾಖಲೆ ಇಲ್ವಾ ಎಂದು ಕೇಳಿದ್ದಕ್ಕೆ ಕಿರುಕುಳ ಕೊಡ್ತಾರೆ ಸರ್ ಹೀಗಾಗಿ ದಾಖಲೆ ಬಿಡುಗಡೆ ಮಾಡಿಲ್ಲ ಎಂದು ನನಗೆ ಹೇಳಿದ್ದಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಅವ್ಯಾಹತವಾಗಿ 40% ಪರ್ಸೆಂಟ್ ದಂಧೆ ನಡೆಯುತ್ತಿದೆ. ನನ್ನ ಅವಧಿಯಲ್ಲಿ 5 ಕೇಸ್ ಗಳನ್ನು ಸಿಬಿಐಗೆ ನೀಡಿದ್ದೇವೆ. 40 ಪರ್ಸೆಂಟ್ ಕಮಿಷನ್ ಬಗ್ಗೆ ರಾಜ್ಯ ಸರ್ಕಾರ ಸಿಬಿಐಗೆ ನೀಡಲಿ ಎಂದು ಆಗ್ರಹಿಸಿದ್ದಾರೆ.