ಹಾವೇರಿ : ಸ್ತ್ರೀ ಸಾಮಥ್ರ್ಯ ಯೋಜನೆಯಡಿ ರಾಜ್ಯದ 33 ಸಾವಿರ ಗ್ರಾಮಗಳ ಪ್ರತಿ ಸ್ತ್ರೀ ಶಕ್ತಿ ಸಂಘಕ್ಕೆ 1.50 ಲಕ್ಷ ಸಾಲ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಣೇಬೆನ್ನೂರ ಕ್ಷೇತ್ರದಲ್ಲಿ ಕೈಗೊಂಡಿರುವ ರೂ.51.90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಅವರು, ಬಡ ಕೂಲಿಕಾರರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯದಲ್ಲಿ 4000 ವಿಶೇಷ ಅಂಗನವಾಡಿ ಆರಂಭಕ್ಕೆ ಇಂದಿನ ಸಂಪುಟದಲ್ಲಿ ತೀರ್ಮಾನಕೈಗೊಳ್ಳಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಕರಕುಶಲ ಕಾರ್ಮಿಕರಾದ ಕಮ್ಮಾರ, ಕುಂಬಾರ, ನೇಕಾರ, ವಿಶ್ವಕರ್ಮ ಸೇರಿದಂತೆ ಸುಮಾರು 10 ರಿಂದ 15 ವೃತ್ತಿದಾರರಿಗೆ ರೂ. 50 ಸಾವಿರ ವಿತರಣೆಗೆ ವಿನೂತನ ಯೋಜನೆ ಜಾರಿ ತರಲಾಗುವುದು. ದೂರದ ಕಾಡು –ಮೇಡುಗಳಲ್ಲಿ ಕುರಿಕಾಯುವ ಕುರಿಗಾಯಿಗಳಿಗೆ ಬರುವ ದಿನಗಳಲ್ಲಿ ವಿಶೇಷ ಯೋಜನೆ ತರಲಾಗುವುದು. ಕುರಿಗಾರರ ಪ್ರತಿ ಸಂಘಕ್ಕೆ 20 ಕುರಿ ಹಾಗೂ ಒಂದು ಟಗರು ನೀಡಲು ನಿರ್ಧಾರ ಮಾಡಲಾಗಿದೆ, ನವಂಬರ್ ಮಾಹೆಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗುವುದು ಎಂದರು.
Shocking: ಆಸ್ಪತ್ರೆಯಲ್ಲಿ ಸತ್ತ ಬಾಲಕಿ ಸ್ಮಶಾನದಲ್ಲಿ ಜೀವಂತ… ಅಂತ್ಯಕ್ರಿಯೆ ವೇಳೆ ನಡೆದಿದ್ದೇನು?
ಸ್ತ್ರೀ ಸಾಮಥ್ರ್ಯ ಯೋಜನೆಯಡಿ ರಾಜ್ಯದ 33 ಸಾವಿರ ಗ್ರಾಮಗಳ ಪ್ರತಿ ಸ್ತ್ರೀ ಶಕ್ತಿ ಸಂಘಕ್ಕೆ 1.50 ಲಕ್ಷ ಸಾಲ ವಿತರಣೆಗೆ ರೂ.10 ಲಕ್ಷ ಯೋಜನೆ ರೂಪಿಸಲಾಗಿದೆ. ಸ್ತ್ರೀಯರ ಸಾಮಥ್ರ್ಯ ರಾಜ್ಯಕಟ್ಟಲು ಬಳಕೆಯಾಗಬೇಕು. ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಯುವಕರಿಗೆ ಕೆಲಸ ನೀಡಲು ಯೋಜನೆ ಜಾರಿಗೊಳಿಸಲಾಗುವುದು. ಸ್ತ್ರೀ ಸಾಮಥ್ರ್ಯ ಯೋಜನೆ ಮಾದರಿಯಲ್ಲಿ ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘರಚಿಸಿ ಯುವಕರಿಗೆ ಸ್ವ ಉದ್ಯೋಗ ಕೈಗೊಳ್ಳಲು ್ಲ ಪ್ರತಿ ಸಂಘಕ್ಕೆ ಸರ್ಕಾರದಿಂದ ರೂ.1.50 ಲಕ್ಷ ಸಹಾಯಧನ ಸೇರಿದಂತೆ ರೂ. 10 ಲಕ್ಷ ನೀಡಲಾಗುವುದು. ಇವರು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಹಾವೇರಿ ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆಯಡಿ ರೂ.1200 ಕೋಟಿ ಅನುದಾನ ನೀಡಲಾಗಿದೆ. ಮೆಡ್ಲೇರಿ, ಹೋಳೆಆನ್ವೇರಿ, ಹಾನಗಲ್ ತಾಲೂಕು ಸಮ್ಮಸಗಿ, ಬಾಳಂಬೀಡ, ಹಾಗೂ ಬ್ಯಾಡಗಿ ಆಣೂರ ಬುಡಪನಹಳ್ಳಿ, ಹಿರೇಕೆರೂರ ಸೇರಿದಂತೆ ನೀರವಾರಿ ಯೋಜನೆಗಳನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆ ಮಾಡುವೆ ಎಂದರು.
ಒಂದು ನೂರು ಕೋಟಿ ವೆಚ್ಚದಲ್ಲಿ ಮೆಗಾಡೈರಿ ಆರಂಭಕ್ಕೆ ಶೀಘ್ರವೇ ಅಡಿಗಲ್ಲು ಹಾಕುವೆ, ರೂ.50 ಕೋಟಿ ವೆಚ್ಚದಲ್ಲಿ ಯು.ಎಸ್.ಟಿ.ಪ್ಲಾಂಟ್ ಡಿಸೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿ ಉಂಟಾಗಲಿದೆ. ಒಂದು ಲಕ್ಷದಿಂದ 1.80 ಲಕ್ಷ ಲೀಟರ್ ಉತ್ಪಾದನೆ ಹೆಚ್ಚಳವಾಗಿದೆ. ಜಿಲ್ಲೆಗೆ ಇಂಜನೀಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ನಮ್ಮ ಅವಧಿಯಲ್ಲಿ ತರಲಾಗಿದೆ. ಒಂದು ಲಕ್ಷ ಎಕರೆ ಜಮೀನಿಗೆ ತುಂಗಾ ಮೇಲ್ದಂಡೆ ಯೋಜನೆಯಡಿ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ ಎಂದರು.