ನವದೆಹಲಿ: ಬುಧವಾರ ರಾತ್ರಿ ದೆಹಲಿಗೆ ಬಂದಿಳಿದ ಅಮೆರಿಕದ ಪತ್ರಕರ್ತ ಅಂಗದ್ ಸಿಂಗ್ ಅವರನ್ನು ನ್ಯೂಯಾರ್ಕ್ಗೆ ಗಡಿಪಾರು ಮಾಡಲಾಗಿದೆ ಎಂದು ಅವರ ತಾಯಿ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಯುಎಸ್ ಪ್ರಜೆ ಮತ್ತು ಪತ್ರಕರ್ತ ಅಂಗದ್ ಸಿಂಗ್ ಅವರನ್ನು ಬುಧವಾರ ರಾತ್ರಿ ದೆಹಲಿ ವಿಮಾನ ನಿಲ್ದಾಣದಿಂದ ಗಡೀಪಾರು ಮಾಡಲಾಗಿದೆ ಎಂದು ಪಂಜಾಬ್ನಲ್ಲಿರುವ ಅವರ ಕುಟುಂಬ ಸದಸ್ಯರು ಗುರುವಾರ ಹೇಳಿದ್ದಾರೆ. ಇದಕ್ಕೆ ಅಧಿಕಾರಿಗಳು ಯಾವುದೇ ಕಾರಣ ನೀಡಿಲ್ಲ ಎಂದಿದ್ದಾರೆ.
ಅವರ ಕುಟುಂಬದ ಪ್ರಕಾರ, ಯುಎಸ್ ಸುದ್ದಿ ಮತ್ತು ಮನರಂಜನಾ ಕಂಪನಿಯೊಂದಿಗೆ ಸಂಬಂಧ ಹೊಂದಿರುವ ಸಿಂಗ್ ಅವರು ಬುಧವಾರ ರಾತ್ರಿ 8.30 ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮೂರು ಗಂಟೆಗಳ ಒಳಗೆ ಅವರನ್ನು ಯುಎಸ್ಗೆ ಗಡೀಪಾರು ಮಾಡಲಾಯಿತು. ಸಿಂಗ್ ಅವರು ಕುಟುಂಬದವರ ಭೇಟಿಗಾಗಿ ಭಾರತಕ್ಕೆ ಬಂದಿದ್ದರು ಎಂದು ಅವರು ಹೇಳಿದ್ದಾರೆ.
ಸಿಂಗ್ ಅವರ ತಾಯಿ ಗುರ್ಮೀತ್ ಕೌರ್ ಫೇಸ್ಬುಕ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, “ಇಂದು ಪಂಜಾಬ್ನಲ್ಲಿ ನಮ್ಮನ್ನು ಭೇಟಿ ಮಾಡಲು ದೆಹಲಿಗೆ 18 ಗಂಟೆಗಳ ಪ್ರಯಾಣಿಸಿದ ಅಮೇರಿಕನ್ ಪ್ರಜೆ ನನ್ನ ಮಗನನ್ನು ಗಡೀಪಾರು ಮಾಡಲಾಗಿದೆ. ಅವರನ್ನು ಮುಂದಿನ ವಿಮಾನದಲ್ಲಿ ನ್ಯೂಯಾರ್ಕ್ಗೆ ಹಿಂತಿರುಗಿಸಲಾಯಿತು. ಅಧಿಕಾರಿಗಳು ಇದಕ್ಕೆ ಕಾರಣವನ್ನು ನೀಡಲಿಲ್ಲ ಎಂದಿದ್ದಾರೆ.
ಸಿಂಗ್ ಅವರ ಗಡಿಪಾರು ಕುರಿತು ತಕ್ಷಣದ ಅಧಿಕೃತ ಪ್ರತಿಕ್ರಿಯೆ ಇಲ್ಲ.
Shocking news: ಆಸ್ತಿ ಮಾಲೀಕತ್ವದ ಹಕ್ಕು ಪಡೆಯಲು ಹೆತ್ತ ತಾಯಿಗೇ ವಿಷ ಹಾಕಿ ಕೊಂದ ಮಹಿಳೆ
Shocking: ಆಸ್ಪತ್ರೆಯಲ್ಲಿ ಸತ್ತ ಬಾಲಕಿ ಸ್ಮಶಾನದಲ್ಲಿ ಜೀವಂತ… ಅಂತ್ಯಕ್ರಿಯೆ ವೇಳೆ ನಡೆದಿದ್ದೇನು?