ಮೆಕ್ಸಿಕೋ: ಅನಾರೋಗ್ಯದ ಕಾರಣ ಬಾಲಕಿಯೊಬ್ಬಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಅಲ್ಲಿನ ವೈದ್ಯರು ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿಸಿದರು. ಮರುದಿನ ಆಕೆಯ ಸಂತ್ಯಸಂಸ್ಕಾರ ಮಾಡುವ ವೇಳೆ ಬಾಲಕಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ಆಗಸ್ಟ್ 17 ರಂದು ಮೆಕ್ಸಿಕೋದಲ್ಲಿ ನಡೆದಿದೆ.
ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ಜ್ವರದಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕಿ ಕ್ಯಾಮಿಲಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಅಲ್ಲಿನ ವೈದ್ಯರು ತಾಯಿ ರೊಕ್ಸಾನಾ ಮಾರ್ಟಿನೆಜ್ ಮೆಂಡೋಜಾಗೆ ಬಾಲಕಿಯನ್ನು ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಆದರೆ, ಅದೇ ಸಮಯದಲ್ಲಿ ಬಾಲಕಿಯನ್ನು ಡಿಸ್ಚಾರ್ಜ್ ಮಾಡುವಾಗ ವೈದ್ಯರು ಪ್ಯಾರಸಿಟಮಾಲ್ ಪ್ರಿಸ್ಕ್ರಿಪ್ಷನ್ ನೀಡಿದರು.
ನಂತ್ರ, ಬಾಲಕಿಯನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆಯೂ ಆಕೆಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ನಂತರ, ಕುಟುಂಬವು ಬಾಲಕಿಯನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಿದರು. ಚಿಕಿತ್ಸೆಯ ಬಳಿಕ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ನಿರ್ಜಲೀಕರಣವು ಬಾಲಕಿಯ ಸಾವಿಗೆ ಅಧಿಕೃತ ಕಾರಣವೆಂದು ವೈದ್ಯರು ತಿಳಿಸಿದರು.
ಮರುದಿನ ಬಾಲಕಿಯ ಅಂತ್ಯಕ್ರಿಯೆ ನಡೆಸುತ್ತಿರುವಾಗ ಬಾಲಕಿ ಕ್ಯಾಮಿಲಾಳ ದೇಹದಲ್ಲಿ ಕೆಲವು ಚಲನವಲನಗಳು ಕಂಡ ಅಜ್ಜಿ ಕೂಡಲೇ ಬಾಲಕಿಯನ್ನು ಪರೀಕ್ಷಿಸಿದಾಗ ಬಾಲಕಿಯ ನಾಡಿಮಿಡಿತದಿಂದ ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂದು ಪತ್ತೆಯಾಗಿದೆ.
ಬಾಲಕಿಯನ್ನು ಕೂಡಲೇ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ವೈದ್ಯರು ಆಕೆಗೆ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ವಿಫಲರಾದರು. ಬಾಲಕಿ ಕ್ಯಾಮಿಲಾಳ ನಿಜವಾಗಿಯೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಕ್ಯಾಮಿಲಾ ಈ ಬಾರಿ ಸೆರೆಬ್ರಲ್ ಎಡಿಮಾದಿಂದ (ಮೆದುಳಿನ ಊತ)ದಿಂದ ಸತ್ತಿದ್ದಾಳೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
BIGG NEWS: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಇಬ್ಬರು ಸಹಚರರ ವಿರುದ್ಧ ಕೊಲೆ ಆರೋಪ
Shocking news: ಆಸ್ತಿ ಮಾಲೀಕತ್ವದ ಹಕ್ಕು ಪಡೆಯಲು ಹೆತ್ತ ತಾಯಿಗೇ ವಿಷ ಹಾಕಿ ಕೊಂದ ಮಹಿಳೆ