ಕೇರಳ: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ತನ್ನ ತಾಯಿಯ ಆಸ್ತಿಯ ಮಾಲೀಕತ್ವದ ಹಕ್ಕು ಪಡೆಯಲು ಮಹಿಳೆಯೊಬ್ಬರು ತನ್ನ ತಾಯಿಗೇ ವಿಷ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ವರದಿಗಳ ಪ್ರಕಾರ, ಆರೋಪಿ ಮಹಿಳೆಯ ತಾಯಿ ಆಗಸ್ಟ್ 18 ರಂದು ಚಹಾ ಸೇವಿಸಿದ ನಂತರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತು. ಹೀಗಾಗಿ, ಅವರು ಕೂಡಲೇ ಆಸ್ಪತ್ರೆಗೆ ಹೋದರೂ ಈ ಬಗ್ಗೆ ನಿಖರವಾದ ಕಾರಣ ವೈದ್ಯರಿಗೆ ತಿಳಿಯಲಿಲ್ಲ. ನಂತ್ರ ಮೂರನೇ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ವಿಷ ಸೇವನೆ ಶಂಕೆ ವ್ಯಕ್ತಪಡಿಸಿದರು. ಆದ್ರೆ, ಅಷ್ಟರಲ್ಲಾಗಲೇ ಅವಧಿ ಮೀರಿದ್ದ ಕಾರಣ ತಾಯಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಂತ್ರಸ್ತೆಯ ದೇಹದಲ್ಲಿ ಇಲಿ ಪಾಷಾಣ ಇರುವುದು ದೃಢಪಟ್ಟಿದೆ.
ಆಸ್ತಿಗಾಗಿ ತಾಯಿಗೇ ವಿಷ ಹಾಕಿದ ಮಹಿಳೆ
ಕಳೆದ 12 ವರ್ಷಗಳಿಂದ ತನ್ನ ಇಬ್ಬರು ಮಕ್ಕಳೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದ ಮಹಿಳೆ ಆಕೆಯ ತಂದೆ-ತಾಯಿಯ ಮರಣದ ನಂತರ ಅವರ ಇಚ್ಛೆಯ ಪ್ರಕಾರ ಆಸ್ತಿಯನ್ನು ಪಡೆಯಲು ಅವಳು ತನ್ನ ತಾಯಿಯನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅಪರಾಧವನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ.
ತಾಯಿಗೆ ನೀಡಿದ್ದ ಚಹಾದಲ್ಲಿ ಇಲಿ ಪಾಷಾಣ ಬೆರೆಸಿ ಕೊಂದ ಆರೋಪಿ ಮಹಿಳೆಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
BIGG NEWS: ಮಧ್ಯಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ; ಮದುವೆಯ ಸಂಭ್ರಮದಲ್ಲಿದ್ದ ಐವರು ಸಾವು