ಬೆಂಗಳೂರು: ರಾಜ್ಯದ ಸರ್ಕಾರ ಲಂಚ- ಮಂಚದ ಸರ್ಕಾರ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಈ ಕುರಿತು @BJP4Karnataka ಎಂಬ ಟ್ಯಾಗಿನೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು,
ರಾಜ್ಯ ಸರ್ಕಾರದ ಕಮಿಷನ್ ಭ್ರಷ್ಟಾಚಾರದ ವಿರಾಟ್ ರೂಪದಲ್ಲಿ ಹೆಣ್ಣು, ಹಣ, ಹೆಂಡಗಳೂ ಸ್ಥಾನ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ.
ಶಾಸಕರ ಖರೀದಿ, ಸಿಡಿಗಳ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿಯದ್ದು “ಲಂಚ-ಮಂಚದ ಸರ್ಕಾರ” ಎನ್ನವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಆಡಳಿತದಲ್ಲಿ ‘ಮಂಚ’ವೂ ಲಂಚದ ರೂಪ ಪಡೆದಿದೆ ಎಂದು ಆರೋಪಿಸಿದೆ.
ಗುತ್ತಿಗೆದಾರರಷ್ಟೇ ಅಲ್ಲ, ಬಡ ಪೌರ ಕಾರ್ಮಿಕರೂ ಸಹ ರಾಜ್ಯ ಸರ್ಕಾರದ ಕಮಿಷನ್ ದಾಹದ ಬಲಿಪಶುಗಳಾಗಿದ್ದಾರೆ. ಒಂದೆಡೆ ಸಾಲು ಸಾಲು ನೇಮಕಾತಿ ಅಕ್ರಮಗಳು, ಮತ್ತೊಂದೆಡೆ ವ್ಯವಸ್ಥೆಯ ಕಮಿಷನ್ ಲೂಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.ಇನ್ನೊಮ್ಮೆ ಅಧಿಕಾರ ಸಿಗದು, ಈಗಲೇ ಸಾಧ್ಯವಾದಷ್ಟು ಬಾಚಿಕೊಳ್ಳೋಣ ಎಂಬ ಹಪಹಪಿತನವೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
'@BJP4Karnataka ಸರ್ಕಾರದ ಕಮಿಷನ್ ಭ್ರಷ್ಟಾಚಾರದ ವಿರಾಟ್ ರೂಪದಲ್ಲಿ ಹೆಣ್ಣು, ಹಣ, ಹೆಂಡಗಳೂ ಸ್ಥಾನ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ.
ಶಾಸಕರ ಖರೀದಿ, ಸಿಡಿಗಳ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿಯದ್ದು "ಲಂಚ-ಮಂಚದ ಸರ್ಕಾರ" ಎನ್ನವುದರಲ್ಲಿ ಅನುಮಾನವಿಲ್ಲ.
ಬಿಜೆಪಿ ಆಡಳಿತದಲ್ಲಿ 'ಮಂಚ'ವೂ ಲಂಚದ ರೂಪ ಪಡೆದಿದೆ!#BJPBrashtotsava pic.twitter.com/vKOzPJu6o1
— Karnataka Congress (@INCKarnataka) August 25, 2022