ಮೈಸೂರು: ಇಂದಿನ ದಿನಗಳಲ್ಲಿ ಎತ್ತ ನೋಡಿದ್ರೂ ಡಿಜಿಟಲ್ ಹಾವಳಿ ಹೆಚ್ಚಾಗಿದೆ. ಇದು ಬಂದ್ಮೇಲೆ ಹೆಚ್ಚಿನ ಜನರು ಕೈಯಲ್ಲಿ ಹಣ ಇಟ್ಟುಕೊಳ್ಳೊದೆ ಮೊಬೈಲ್ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಯಂ ಅಥವಾ ಇನ್ಯಾವುದೋ ಆಪ್ ಮೂಲಕ ಆನ್ಲೈನ್ ಟ್ರಾನ್ಸ್ ಫರ್ ಮಾಡುತ್ತಾರೆ. ಇದೀಗ ಈ ಡಿಜಿಟಲ್ ಯುಗ ದೇವಸ್ತಾನಗಳಿಗೂ ಹಬ್ಬಿದೆ.
BIGG NEWS: ಗೌರಿ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ : ಸ್ತ್ರೀ ಶಕ್ತಿ ಸಂಘಕ್ಕೆ 1.5 ಲಕ್ಷ ಸಾಲ ಘೋಷಣೆ
ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಆವರಿಸಿಕೊಂಡಿರುವ ಡಿಜಿಟಲೀಕರಣ ಇದೀಗ ಧಾರ್ಮಿಕ ಕ್ಷೇತ್ರಕ್ಕೂ ಬಂದು ತಲುಪಿದೆ. ದೇವರಿಗೆ ನಾನಾ ರೂಪದಲ್ಲಿ ಕಾಣಿಕೆ ಅರ್ಪಿಸಿ ಭಕ್ತಿ ಮೆರೆಯುತ್ತಿದ್ದ ಭಕ್ತರು, ಕಾಣಿಕೆ ಸಮರ್ಪಿಸಲು ದೇವಸ್ಥಾನಕ್ಕೆ ಬರುವ ಅಗತ್ಯ ಇಲ್ಲ. ತಾವಿದ್ದಲ್ಲೇ ದೇವರಿಗೆ ಕಾಣಿಕೆ ಸಲ್ಲಿಸಬಹುದು.
ಹೌದು ಇಂದಿನಿಂದ ಚಾಮುಂಡಿ ಬೆಟ್ಟದಲ್ಲಿ ಇ-ಹುಂಡಿ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಭಕ್ತರು ಇನ್ಮುಂದೆ ಮನೆಯಲ್ಲೇ ಕೂತು ದೇವಿಗೆ ಕಾಣಿಕೆ ಸಲ್ಲಿಸಹುದು.
BIGG NEWS: ಗೌರಿ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ : ಸ್ತ್ರೀ ಶಕ್ತಿ ಸಂಘಕ್ಕೆ 1.5 ಲಕ್ಷ ಸಾಲ ಘೋಷಣೆ
ದೇವಸ್ಥಾನದಲ್ಲಿ ಕ್ಯೂ ಆರ್ ಸ್ಕ್ಯಾನ್ ಲೇಬಲ್ ಅಂಟಿಸಿ ಭಕ್ತರಿಂದ ಕಾಣಿಕೆ ಸ್ವೀಕರಿಸಲಾಗುತ್ತಿದೆ. ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲೂ ಇ- ಹುಂಡಿ ಜಾರಿಯಾಗುತ್ತಿದ್ದು, ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ಮೊದಲ ಬಾರಿಗೆ ಜಾರಿ ಮಾಡಲಾಗಿದೆ.
ಇಲ್ಲಿ ಭಕ್ತರು ಗೂಗಲ್ ಪೇ, ಫೋನ್ ಪೇ, ಬೀಮ್, ಪೇಟಿಎಂ ಸೇರಿದಂತೆ ಯಾವುದೇ ಆ್ಯಪ್ನಿಂದ ಕಾಣಿಕೆ ಸಲ್ಲಸಲು ಅವಕಾಶ ಮಾಡಿಕೊಡಲಾಗಿದೆ. ಹುಂಡಿ, ಭಕ್ತರ ಸರತಿ ಸಾಲುಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡಿ, ಕಾಷಿಕೆ ಸಲ್ಲಿಸಲು ಅನುಕೂಲ ಮಾಡಿಕೊಡಲಾಗಿದೆ.
114158869@cnrb ಸಂಖ್ಯೆಯ ಅಕೌಂಟ್ ನಂಬರ್ ಹೊಂದಿರುವ ಸ್ಕ್ಯಾನರ್ ಇದಾಗಿದ್ದು, ಹೊರ ರಾಜ್ಯದ ಹಾಗೂ ದೇಶ ವಿದೇಶಗಳ ಭಕ್ತರ ಬೇಡಿಕೆಗೆ ಸ್ಪಂದಿಸಿ ಇ- ಹುಂಡಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.