ಮಡಿಕೇರಿ : ರಾಜ್ಯದಲ್ಲಿ 40 ಪಸೆಂಟ್ ಕಮಿಷನ್ ವ್ಯವಹಾರ ನಡೆಯುತ್ತಿದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಬೆನ್ನಲ್ಲೇ ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ.
ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಸಸ್ಪೆಂಡ್ ಆದ ಇಂಜಿನಿಯರ್ ಮರು ನೇಮಕಕ್ಕೆ 2.5 ಕೋಟಿ ಲಂಚ ಪಡೆಯಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಸಸ್ಪೆಂಡ್ ಆಗಿದ್ದ ಇಂಜಿನಿಯರ್ ಶ್ರೀಕಂಠಯ್ಯ ಮರು ನೇಮಕಕ್ಕೆ ಸಚಿವರಾಗಿದ್ದಾಗ ಕೆ.ಎಸ್. ಈಶ್ವರಪ್ಪಗೆ ಬೋಪಯ್ಯ ಪತ್ರ ಬರೆದಿದ್ದರು. ಎಂದು ಆರೋಪಿಸಿದ್ದಾರೆ.
2012ರ ಅಕ್ಟೊಬರ್18 ರಂದು ಗುತ್ತಿಗೆದಾರರಿಂದ ಶ್ರೀಕಂಠಯ್ಯ ಲಂಚ ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದರು. ಎಸಿಬಿ ಅಧಿಕಾರಿಗಳ ದಾಳಿ ಬಳಿಕ ಶ್ರೀಕಂಠಯ್ಯ ಅಮಾನತು ಮಾಡಲಾಗಿತ್ತು ಎಂದು ಹೇಳಿದ್ದಾರೆ.
Job Alert : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ