ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೇಹದ ತೂಕ ಹೆಚ್ಚಳದಿಂದ ಹೆಚ್ಚಿನ ಜನರು ಬಳಲುತ್ತಿದ್ದಾರೆ. ಹೆಚ್ಚಿದ ಕೊಬ್ಬನ್ನು ಕಡಿಮೆ ಮಾಡಲು ದೈನಂದಿನ ವ್ಯಾಯಾಮ ಮತ್ತು ಔಷಧಿ ಸೇವನೆಯು ತೂಕವನ್ನು ಕಡಿಮೆ ಮಾಡುವುದಿಲ್ಲ. ಹೀಗಾಗಿ ಹಲವರು ಆತಂಕಗೊಂಡಿದ್ದಾರೆ. ಹಾಗಲಕಾಯಿ ಜ್ಯೂಸ್ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದು ಕಹಿ ಗುಣವನ್ನು ಹೊಂದಿರುವುದರಿಂದ ಹೆಚ್ಚಿನ ಜನರು ಇಷ್ಟ ಪಡುವುದಿಲ್ಲ
ವಾಸ್ತವವಾಗಿ ಉತ್ತಮ ಪ್ರಮಾಣದ ಕ್ಯಾಲೋರಿಗಳು, ಫೈಬರ್, ವಿಟಮಿನ್ಗಳು, ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಅದರ ಸಹಾಯದಿಂದ ತೂಕವನ್ನು ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ ಮಧುಮೇಹ, ರೋಗನಿರೋಧಕ ಶಕ್ತಿ ಮತ್ತು ತ್ವಚೆಗೂ ಇದು ತುಂಬಾ ಪ್ರಯೋಜನಕಾರಿ. ಅದರ ಪ್ರಯೋಜನಗಳನ್ನು ತಿಳಿಯಿರಿ.
ಪ್ರಯೋಜನಗಳನ್ನು ತಿಳಿದುಕೊಳ್ಳಿ
ಹಾಗಲಕಾಯಿ ಬಾಯಿಗೆ ಕಹಿ ಅನಿಸಿದರೂ ಆರೋಗ್ಯಕ್ಕೆ ತುಂಬಾ ಸಿಹಿ. ಇದನ್ನು ತಿಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಸೌಂದರ್ಯದಿಂದ ಹಿಡಿದು ನಮ್ಮ ದೇಹದ ಆರೋಗ್ಯದ ರಕ್ಷಣೆಗೆ ಅತ್ಯಂತ ಪರಿಣಾಮಕಾರಿಯಾಗಿ ಹೋರಾಡುವ ಗುಣ ಲಕ್ಷಣ ಹಾಗಲಕಾಯಿಗೆ ಇದೆ.
ಮಧ್ಯಪ್ರದೇಶದಲ್ಲಿ ಭಾರೀ ಪ್ರವಾಹ: ಗರ್ಭಿಣಿ ಮಹಿಳೆಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯ ಆಡಳಿತ… Video
ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ ಆರೋಗ್ಯಕರವಾಗಿ ಮೈ ತೂಕ ಇಳಿಸಬಹುದು. ಖಾಲಿ ಹೊಟ್ಟೆಯಲ್ಲಿ ಬೆಳಗಿನ ಸಮಯದಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ರಕ್ತ ಶುದ್ಧಿ ಆಗುವುದರ ಜೊತೆಗೆ ಅತ್ಯಂತ ಸ್ಪಷ್ಟವಾದ ಮತ್ತು ಹೊಳೆಯುವ ಕೋಮಲ ತ್ವಚೆ ನಿಮ್ಮದಾಗುತ್ತದೆ.
ಹಾಗಾಲಕಾಯಿಯಲ್ಲಿರುವ ಪೋಷಕಾಂಶಗಳು: ಹಾಗಲಕಾಯಿ ರಸವು ತನ್ನಲ್ಲಿ ಫೋಲೇಟ್, ಜಿಂಕ್, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ‘ ಎ ‘ ಮತ್ತು ವಿಟಮಿನ್ ‘ ಸಿ ‘ ನಂತಹ ಹಲವಾರು ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಬೀಟಾ-ಕ್ಯಾರೋಟಿನ್ ಮಟ್ಟವನ್ನು ಹೊಂದಿದೆ.
ಮಧ್ಯಪ್ರದೇಶದಲ್ಲಿ ಭಾರೀ ಪ್ರವಾಹ: ಗರ್ಭಿಣಿ ಮಹಿಳೆಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯ ಆಡಳಿತ… Video
ಹಾಗಲಕಾಯಿ ಜ್ಯೂಸ್ ದೇಹದಲ್ಲಿ ಇನ್ಸುಲಿನ್ ಚಟುವಟಿಕೆ ಹೆಚ್ಚಿಸಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ. ಮೈ ಬೊಜ್ಜು ಕರಗಲು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಬಾರದು. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಜನರಿಗೆ ಹಾಗಲಕಾಯಿ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು ಎಂದು ಹೇಳಬಹುದು. ನಮ್ಮ ದೇಹದ ರಕ್ತವನ್ನು ಅಷ್ಟೇ ಅಚ್ಚುಕಟ್ಟಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಸ್ವಚ್ಛ ಮಾಡುತ್ತದೆ.
ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೈಪ್ – 2 ಡಯಾಬಿಟಿಸ್ ಸೇರಿದಂತೆ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಧ್ಯಪ್ರದೇಶದಲ್ಲಿ ಭಾರೀ ಪ್ರವಾಹ: ಗರ್ಭಿಣಿ ಮಹಿಳೆಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯ ಆಡಳಿತ… Video
ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.
ಹಾಗಾಲಕಾಯಿ ಜ್ಯೂಸ್ ಮಾಡುವ ವಿಧಾನ:
ಹಾಗಲಕಾಯಿ, ನೀರು, ಉಪ್ಪು ಹಾಕಿ ಜ್ಯೂಸ್ ಮಾಡಿ ನಿಂಬೆ ರಸ ಹಿಂಡಿ ಕುಡಿಯಿರಿ. ಮಧುಮೇಹಿಗಳು ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಈ ಜ್ಯೂಸ್ ಕುಡಿಯುವುದು ಒಳ್ಳೆಯದು.
ಮಧ್ಯಪ್ರದೇಶದಲ್ಲಿ ಭಾರೀ ಪ್ರವಾಹ: ಗರ್ಭಿಣಿ ಮಹಿಳೆಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯ ಆಡಳಿತ… Video