ಕಾಶ್ಮೀರ: ಕೆಲವು ದಿನಗಳಿಂದ ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಪೋಸ್ಟ್ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡುತ್ತಿದ್ದ ಭಯೋತ್ಪಾದಕನ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸುವ ಮೂಲಕ ಸೆರೆಹಿಡಿದಿದೆ. ಗಾಯಗೊಂಡ ಉಗ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಭಾರತೀಯ ಸೈನಿಕರು “ಮೂರು ಬಾಟಲಿ ರಕ್ತ ದಾನ” ಮಾಡಿದ್ದಾರೆ ಎಂದು ಸೇನೆಯು ಬುಧವಾರ ತಿಳಿಸಿದೆ.
ಭಯೋತ್ಪಾದಕನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿ ಜಿಲ್ಲೆಯ ಸಬ್ಜ್ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ (32) ಎಂದು ಗುರುತಿಸಲಾಗಿದೆ.
ಘಟನೆಯ ವಿವರಗಳನ್ನು ನೀಡಿದ ನೌಶೇರಾ ಬ್ರಿಗೇಡ್ನ ಕಮಾಂಡರ್ ಬ್ರಿಗೇಡಿಯರ್ ಕಪಿಲ್ ರಾಣಾ, ʻಆಗಸ್ಟ್ 21 ರಂದು ನೌಶೇರಾದ ಜಂಗಾರ್ ಸೆಕ್ಟರ್ನಲ್ಲಿ ನಿಯೋಜಿಸಲಾದ ಸೈನಿಕರು ಭಾರತದ ಗಡಿ ನಿಯಂತ್ರಣ ರೇಖೆಯ ಭಾಗದಲ್ಲಿ ಎರಡ್ಮೂರು ಭಯೋತ್ಪಾದಕರನ್ನು ಗುರುತಿಸಿದ್ದಾರೆ. ಒಬ್ಬ ಭಯೋತ್ಪಾದಕ ಭಾರತೀಯ ಪೋಸ್ಟ್ನ ಸಮೀಪಕ್ಕೆ ಬಂದು ಬೇಲಿಯನ್ನು ದಾಟಲು ಪ್ರಯತ್ನಿಸುತ್ತಿದ್ದನು. ಈ ವೇಳೆ ಎಚ್ಚೆತ್ತುಕೊಂಡ ಸೇನೆ ಗುಂಡಿನ ದಾಳಿ ನಡೆಸಿ, ಉಗ್ರನನ್ನು ಸೆರೆಹಿಡಿದಿದೆ. ಈ ವೇಳೆ ಉಗ್ರನ ತೊಡೆ ಮತ್ತು ಭುಜಕ್ಕೆ ಗುಂಡು ತಗುಲಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ, ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಉಗ್ರ ಗಾಯಗೊಂಡು ತೀವ್ರ ರಕ್ತಸ್ರಾವಾಗಿದ್ದರಿಂದ ಆತನಿಗೆ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದರು. ವಿಷಯ ತಿಳಿದ ನಮ್ಮ ತಂಡದ ʻಸೈನಿಕರು ಉಗ್ರನಿಗೆ ಮೂರು ಬಾಟಲಿ ರಕ್ತ ನೀಡಿದ್ದಾರೆʼ. ನಂತ್ರ, ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ʻನನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಕಳುಹಿಸಿದ್ದಾರೆʼ ಎಂದು ವಿಚಾರಣೆ ವೇಳೆ ಉಗ್ರ ತಬಾರಕ್ ಹುಸೇನ್ ಬಹಿರಂಗಪಡಿಸಿದ್ದಾನೆ. ಈ ಕೃತ್ಯಕ್ಕೆ ಕರ್ನಲ್ 30,000 ರೂ. ನೀಡಿದ್ದಾನೆ ಎಂದು ಭಯೋತ್ಪಾದಕ ತಿಳಿಸಿದ್ದಾನೆ.
#WATCH | Tabarak Hussain, a fidayeen suicide attacker from PoK, captured by the Indian Army on 21 August at LOC in Jhangar sector of Naushera, Rajouri, says he was tasked by Pakistan Army’s Col. Yunus to attack the Indian Army for around Rs 30,000 pic.twitter.com/UWsz5tdh2L
— ANI (@ANI) August 24, 2022
BIGG NEWS: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಆಟಗಳನ್ನು ಪ್ರಾರಂಭಿಸಿದ ಸರ್ಕಾರ
BIGG NEWS: ಚಿನ್ನಾಭರಣ ಪ್ರಿಯರಿಗೆ ಮತ್ತೆ ಶಾಕ್; ಮತ್ತೆ ಚಿನ್ನ, ಬೆಳ್ಳಿ ದರ ಏರಿಕೆ | Gold Rate