ಬೆಂಗಳೂರು : ರಾಜ್ಯದ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಗೆ ಜನಸಂಖ್ಯೆ ಮತ್ತು ಸ್ಥಾನಗಳ ನಿಗದಿಯಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಹಮದಾಬಾದ್ನಿಂದ ವಾರಣಾಸಿಗೆ ಹೋಗಬೇಕಿದ್ದ ವಿಮಾನ 8 ಗಂಟೆ ವಿಳಂಬ: ಪ್ರಯಾಣಿಕರು-ಸಿಬ್ಬಂದಿ ನಡುವೆ ಮಾರಾಮಾರಿ…
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧ್ಯಾದೇಶ 2022 ಇದಕ್ಕೆ 2022 ರ ಆಗಸ್ಟ್ 20 ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಇದನ್ನು 2022 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 06 ಎಂಬುದಾಗಿ ಆಗಸ್ಟ್ 22,2022 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ಸೆಕ್ಷನ್ 121ರ ತಿದ್ದುಪಡಿಯಂತೆ ತಾಲೂಕು ಪಂಚಾಯಿತಿ 12 ಕ್ಷೇತ್ರಗಳಿಗೆ 2 ಲಕ್ಷ ಗ್ರಾಮೀಣ ಜನಸಂಖ್ಯೆ ಬದಲಿಗೆ 2.30 ಲಕ್ಷ ಜನಸಂಖ್ಯೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ 7 ಲಕ್ಷ ಜನಸಂಖ್ಯೆಗೆ ಕನಿಷ್ಠ 20 ಜಿ.ಪಂ. ಕ್ಷೇತ್ರಗಳ ಬದಲಿಗೆ 25 ಕ್ಷೇತ್ರಗಳನ್ನು ಮಾಡಲಾಗಿದೆ. ಅದೇ ರೀತಿ 7ರಿಂದ 9.5 ಲಕ್ಷ ಜನಸಂಖ್ಯೆಗೆ 28 ಸದಸ್ಯರು ಇರಬೇಕು ಎಂದು ತಿಳಿಸಿದೆ.