ನವದೆಹಲಿ: ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಒಳನುಸುಳುವಿಕೆಗೆ ಯತ್ನಿಸುತ್ತಿದ್ದ ಪಾಕ್ ಭಯೋತ್ಪಾದಕನನ್ನು ಭಾರತೀಯ ಸೇನೆ ಸೆರೆಹಿಡಿದಿದೆ.
ಬಂಧಿತ ವ್ಯಕ್ತಿ ಈ ಹಿಂದೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದಕ್ಕಾಗಿ ಬಂಧಿಸಲಾಗಿತ್ತು. ಆದರೆ, ಮಾನವೀಯ ಆಧಾರದ ಮೇಲೆ ವಾಪಸ್ ಕಳುಹಿಸಲಾಗಿತ್ತು. ಆದ್ರೆ, ಇದೀಗ ಮತ್ತೆ ಭಾರತೀಯ ಸೇನೆಗೆ ಸಿಕ್ಕಿಬಿದ್ದಿದ್ದು, ಪಾಕಿಸ್ತಾನ ಸೇನೆಯ ಕರ್ನಲ್ ಭಾರತೀಯ ಪೋಸ್ಟ್ನ ಮೇಲಿನ ದಾಳಿಗಾಗಿ 30,000 (ಪಾಕಿಸ್ತಾನದ ಕರೆನ್ಸಿ) ನೀಡಿದ್ದಾನೆ ಎಂದು ಆರೋಪಿ ಹೇಳಿದ್ದಾನೆ.
#WATCH | Tabarak Hussain, a fidayeen suicide attacker from PoK, captured by the Indian Army on 21 August at LOC in Jhangar sector of Naushera, Rajouri, says he was tasked by Pakistan Army’s Col. Yunus to attack the Indian Army for around Rs 30,000 pic.twitter.com/UWsz5tdh2L
— ANI (@ANI) August 24, 2022
ಆಗಸ್ಟ್ 21 ರಂದು ಮುಂಜಾನೆ ನೌಶೇರಾ ಪ್ರದೇಶದ ಜಂಗರ್ ಸೆಕ್ಟರ್ನಲ್ಲಿ ನಿಯೋಜಿಸಲಾದ ಸೈನಿಕರು ನಿಯಂತ್ರಣ ರೇಖೆಯಲ್ಲಿ ಎರಡರಿಂದ ಮೂರು ಭಯೋತ್ಪಾದಕರ ಚಲನೆಯನ್ನು ಗಮನಿಸಿದ್ದಾರೆ. ಉಗ್ರನು ಬೇಲಿಯನ್ನು ನುಸುಳಲು ಯತ್ನಿಸುತ್ತಿದ್ದಾಗ ಸೇನೆ ಗುಂಡಿನ ದಾಳಿ ನಡೆಸಿದ್ದು, ಆನನ್ನು ಸರೆಹಿಡಿದಿದೆ.
ಇನ್ನಿಬ್ಬರು ನುಸುಳುಕೋರರು ದಟ್ಟ ಕಾಡಿನ ಮೂಲಕ ಪಾಕಿಸ್ತಾನ ಆಕ್ರಮಿತ ಪ್ರದೇಶಕ್ಕೆ ಮರಳುವಲ್ಲಿ ಯಶಸ್ವಿಯಾದರು. “ಗಾಯಗೊಂಡ ಪಾಕ್ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದ್ದು, ವೈದ್ಯಕೀಯ ನೆರವಿನಲ್ಲಿದ್ದಾನೆ ಎಂದು ಸೇನೆ ತಿಳಿಸಿದೆ.
ಭಯೋತ್ಪಾದಕನನ್ನು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಎಂದು ಗುರುತಿಸಲಾಗಿದೆ. ಆತನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಕಳುಹಿಸಿದ್ದಾರೆ ಎಂದು ವಿಚಾರಣೆ ವೇಳೆ ಆತ ಬಹಿರಂಗಪಡಿಸಿದ್ದಾನೆ. ಈ ಕೃತ್ಯಕ್ಕೆ ಕರ್ನಲ್ 30,000 ರೂ. ನೀಡಿದ್ದಾನೆ ಎಂದು ಭಯೋತ್ಪಾದಕ ತಿಳಿಸಿದ್ದಾನೆ.
BIGG NEWS : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಉಚಿತ ಶೂ, ಸಾಕ್ಸ್ ವಿತರಿಸಲು 132 ಕೋಟಿ ರೂ. ಬಿಡುಗಡೆ
Good News : ಹೊಸದಾಗಿ `BPL’ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : 4,300 ಸಿಎಪಿಎಫ್, ಎಸ್, ಐ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ