ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಾಲಿವುಡ್ ನಟ ಸುನಿಲ್ ಶೆಟ್ಟಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಗಳು ಅತಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇಷ್ಟು ದಿನ ರಾಹುಲ್, ಅಥಿಯಾ ಅಫೇರ್ ಮತ್ತು ಮದುವೆಗೆ ಕುರಿತು ಓಡಾಡುತ್ತಿದ್ದ ಊಹಾಪೋಹಗಳಿಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ಬಾಲಿವುಡ್ನಲ್ಲಿ ‘ಅಣ್ಣಾ’ ಎಂದೇ ಜನಪ್ರಿಯರಾಗಿರುವ ಸುನಿಲ್ ಶೆಟ್ಟಿ, ಅಥಿಯಾ ಮತ್ತು ರಾಹುಲ್ ಯಾವಾಗ ಅನ್ನೋದ್ರ ಕುರಿತು ಮಾತನಾಡಿದ್ದಾರೆ. ಸಧ್ಯ ಈ ಸಂದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವ್ರು ಭಾರತೀಯ ಉಪನಾಯಕ ರಾಹುಲ್ ಮತ್ತು ಅವರ ಮಗಳ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ.
ಈ ಸಂದರ್ಶನದಲ್ಲಿ, ನಟ ಸುನಿಲ್ ಶೆಟ್ಟಿಯನ್ನ ಅವರ ಮಗಳು ಅಥಿಯಾ ಮತ್ತು ಕೆ.ಎಲ್ ರಾಹುಲ್ ಮದುವೆ ಯೋಜನೆ ಏನು? ಯಾವ ಸಿದ್ಧತೆಗಳನ್ನ ಮಾಡಲಾಗುತ್ತಿದೆ.? ಮದುವೆ ಯಾವಾಗ ನಡೆಯಲಿದೆ? ಪ್ರಶ್ನಿಸಿದಾಗ, ನಟ “ಮಕ್ಕಳು ನಿರ್ಧರಿಸಿದಾಗ, ಅದು ಸಂಭವಿಸುತ್ತದೆ.” ರಾಹುಲ್ ಈಗ ತುಂಬಾ ಬ್ಯುಸಿಯಾಗಿದ್ದಾರೆ. ಈಗ ಏಷ್ಯಾ ಕಪ್ ಇದೆ. ನಂತ್ರ ವರ್ಲ್ಡ್ ಕಪ್, ಇದಾದ್ಮೇಲೆ ಆಸ್ಟ್ರೇಲಿಯಾ ಪ್ರವಾಸ, ಅದರ ನಂತರ ದಕ್ಷಿಣ ಆಫ್ರಿಕಾದೊಂದಿಗೆ ಸರಣಿ ಇದೆ ಮತ್ತು ನಂತರ ಟಿ20 ವಿಶ್ವಕಪ್ ನಡೆಯಲಿದೆ. ಒಂದು ದಿನದ ವಿಶ್ರಾಂತಿಯ ಮೇಲೆ ನೀವು ಮದುವೆಯಾಗಲು ಸಾಧ್ಯವಿಲ್ಲ ಅಲ್ವಾ” ಎಂದಿದ್ದಾರೆ.
https://www.instagram.com/reel/Chmd89tFt3e/?utm_source=ig_web_copy_link
ವರ್ಷಾಂತ್ಯದಲ್ಲಿ ರಾಹುಲ್-ಅಥಿಯಾ ಮದುವೆ ಸಾಧ್ಯತೆ
ಸುನಿಲ್ ಶೆಟ್ಟಿಯವರ ಮಾತುಗಳಿಂದ ಮದುವೆಯ ಬಗ್ಗೆ ಚರ್ಚೆಗಳು ಗಂಭೀರ ಹಂತದಲ್ಲಿವೆ ಎಂಬುದು ಸ್ಪಷ್ಟವಾಗಿದೆ. ಆದ್ರೆ, ರಾಹುಲ್ ಅವರಿಗೆ ಬಿಡುವಿನ ವೇಳೆಗೆ ಸಂಬಂಧಿಸಿದ ಸಮಸ್ಯೆಗಳಿವೆ. ಸೆಪ್ಟೆಂಬರ್ 11ರಂದು ಏಷ್ಯಾ ಕಪ್ ಮುಗಿದ ನಂತ್ರ ಭಾರತ ತಂಡವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಬ್ಯಾಕ್-ಟು-ಬ್ಯಾಕ್ ಸರಣಿಗಳನ್ನ ಆಡಲಿದೆ. ಇದರ ನಂತರ, ತಂಡವು ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಮೆಗಾ ಕಾರ್ಯಕ್ರಮದ ನಂತ್ರ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದೆ. ಈ ಎಲ್ಲಾ ಪಂದ್ಯಗಳಲ್ಲಿ, ಕೆಎಲ್ ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಭಾಗವಾಗಲಿದ್ದಾರೆ.
ಅಂದರೆ, ನವೆಂಬರ್ 30ಕ್ಕಿಂತ ಮೊದಲು, ರಾಹುಲ್ʼಗೆ ಮದುವೆಗೆ ಸಮಯವಿಲ್ಲ. ಆದ್ರೆ, ಇದರ ನಂತ್ರ ಅಥಿಯಾ ಶೆಟ್ಟಿಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.