ತುಮಕೂರು : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಬದಲಾವಣೆ ಪಕ್ಷದ ಹೈಕಮಾಂಡಿಗೆ ಬಿಟ್ಟ ವಿಚಾರ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು
BIGG NEWS : ʻ ಆನ್ಲೈನ್ ಮದ್ಯ ಮಾರಾಟ ಪ್ರಸ್ತಾವನೆ ʼ ಸರ್ಕಾರದ ಮುಂದಿಲ್ಲ: ಸಚಿವ ಕೆ.ಗೋಪಾಲಯ್ಯ ಸ್ಪಷ್ಟನೆ
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೈ ಬಿಡಬೇಕೆಂಬ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ವಿಚಾರದ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.
BIGG NEWS : ʻ ಆನ್ಲೈನ್ ಮದ್ಯ ಮಾರಾಟ ಪ್ರಸ್ತಾವನೆ ʼ ಸರ್ಕಾರದ ಮುಂದಿಲ್ಲ: ಸಚಿವ ಕೆ.ಗೋಪಾಲಯ್ಯ ಸ್ಪಷ್ಟನೆ
ಅದು ಪಕ್ಷದ ಆಂತರಿಕ ವಿಚಾರ, ಮೂರು ವರ್ಷ ಆದ ಮೇಲೆ ಬೇರೆಯವರಿಗೆ ಅವಕಾಶ ಕೊಡುವುದು ಪಕ್ಷದ ನಿಯಮ. ಇದರ ಬಗ್ಗೆ ತೀರ್ಮಾನ ಕೈ ಗೊಳ್ಳಲು ಕೇಂದ್ರದ ವರಿಷ್ಠರು ಇದ್ದಾರೆ. ನಾವು ಜಿಲ್ಲೆಯಲ್ಲಿ ತಿರ್ಮಾನ ತಗೆದುಕೊಳ್ಳು ಸಾಧ್ಯವಿಲ್ಲ. ಕೇಂದ್ರದಿಂದ ಯಾವ ತಿರ್ಮಾನ ತಗೆದುಕೊಳ್ಳುತ್ತಾರೆಯೊ ಅದಕ್ಕೆ ನಾವೆಲ್ಲರೂ ಬದ್ದರಾಗಿರುವುದಾಗಿ ತಿಳಿಸಿದರು.