ಲಕ್ನೋ: ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್ಗಾಗಿ ವೀಡಿಯೊವನ್ನು ಚಿತ್ರೀಕರಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ರನ್ನೇ ಹೋಲುವ ಕಂಟೆಂಟ್ ಕ್ರಿಯೇಟರ್ ಮತ್ತು ಡಾಪಲ್ಗ್ಯಾಂಗರ್ ಅಜಮ್ ಅನ್ಸಾರಿ ವಿರುದ್ಧ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಎಫ್ಐಆರ್ ದಾಖಲಿಸಿದೆ.
ವರದಿಗಳ ಪ್ರಕಾರ, ಸ್ಥಳೀಯ ನಿವಾಸಿ ಅಜೀಮ್ ಅಹ್ಮದ್ ವೀಡಿಯೋ ಚಿತ್ರೀಕರಣವನ್ನು ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್ ಮಾಡಿದ್ದರು. ಈ ವೇಳೆ ಜನರಿಗೆ ತೊಂದರೆ ಕೂಡ ಉಂಟು ಮಾಡಿದ್ದರು. ಇನ್ಸ್ಟಾಗ್ರಾಮ್ ರೀಲ್ಸ್ ಅನ್ನು ಹಂಚಿಕೊಂಡ ನಂತ್ರ ಈ ವಿಷಯ ಬೆಳಕಿಗೆ ಬಂದಿದೆ. ನದಿಯ ರೈಲ್ವೆ ಸೇತುವೆಯ ಮೇಲೆ ರೀಲ್ಸ್ ಮಾಡಿದ್ದು, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅನ್ಸಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವೀಡಿಯೊದಲ್ಲಿ, ಅನ್ಸಾರಿ ರೈಲ್ವೆ ಸೇತುವೆಯ ಹಳಿಗಳ ಮೇಲೆ ನಿಂತು ಗಿಟಾರ್ ಹಿಡಿದು ಫೋಸ್ ನೀಡುತ್ತಾ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾನೆ. ಬಳಿಕ ಸಿಗರೇಟ್ ಸೇದುತ್ತಾ ಹಳಿಗಳ ಮೇಲೆ ನಡೆದಾಡಿದ್ದಾನೆ. ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
BIGG NEWS: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ನಿರಾಕರಿಸಿದ ಅಶೋಕ್ ಗೆಹ್ಲೋಟ್
ಸಾಯೋ ಮುನ್ನ 6 ಜನರ ಜೀವನಕ್ಕೆ ಬೆಳಕಾದ ಬಾಲಕಿ… ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾವನಾತ್ಮಕ ಪೋಸ್ಟ್!