ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಮೈಸೂರು ವಿವಿಯ ವಿವಿಧ ಅಧ್ಯಯನ ವಿಭಾಗಗಳು ಕೇಂದ್ರ ಹಾಗೂ ಘಟಕ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಪರಿಷ್ಕರಿಸಲು ಮೈಸೂರು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ.
BIGG NEWS : `KPTCL’ ಪರೀಕ್ಷೆ ಅಕ್ರಮ : ಮತ್ತೆ ಮೂವರು ಪೊಲೀಸರ ವಶಕ್ಕೆ
ಅತಿಥಿ ಉಪನ್ಯಾಸಕರಿಗೆ ಒಂದು ಗಂಟೆಗೆ 1,500 ರೂ. ಹಾಗೂ ಮಾಹೆಯಾನ ಗರಿಷ್ಠ 50,000 ರೂ. ಸಂಭಾವನೆ ನೀಡುವಂತೆ ಯುಜಿಸಿ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಪ್ರಸ್ತುತ ತಿಂಗಳಿಗೆ 48 ಗಂಟೆಗಳ ಕಾರ್ಯಭಾರವನ್ನು ನಿರ್ವಹಿಸುತ್ತಿರುವುದರಿಂದ ಯುಜಿಸಿ ನಿಯಮಾನುಸಾರ ಸಂಭಾವನೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಅಕ್ಟೋಬರ್ ತಿಂಗಳಿನಿಂದ ಈ ಪರಿಷ್ಕೃತ ವೇತನ ಅತಿಥಿ ಉಪನ್ಯಾಸಕರ ಕೈ ಸೇರಲಿದೆ.
BIGG NEWS : ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್ : ಆತ್ಮರಕ್ಷಣೆಗಾಗಿ ʻ ಕಾಲಿಗೆ ಗುಂಡು ಹೊಡೆದು ಇಬ್ಬರ ಬಂಧನ ʼ