ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್ಪಿಒ) ಮಂಗಳವಾರ ತನ್ನ ಗರ್ಭಿಣಿ ಪತ್ನಿಯನ್ನು ಹೊಡೆದು ಕೊಂದಿರುವ ಘಟನೆ ನಡೆದಿದ್ದು, ಇದೀಗ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಥುವಾ ಜಿಲ್ಲಾ ಪೊಲೀಸ್ ಲೈನ್ನಲ್ಲಿ ನಿಯೋಜಿತರಾಗಿರು ಎಸ್ಪಿಒ ಮೋಹನ್ ಲಾಲ್ ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಮೃತ ಮಹಿಳೆಯನ್ನು ಆಶಾದೇವಿ (32) ಎಂದು ಗುರುತಿಸಲಾಗಿದೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದು, ಬಿಲ್ಲವರ್ ಪ್ರದೇಶದ ಧರಾಲ್ಟಾ ಗ್ರಾಮದ ನಿವಾಸಿಯಾಗಿದ್ದಾರೆ.
ಲಾಲ್ ಕಳೆದ ಮೂರು ದಿನಗಳಿಂದ ರಜೆಯ ಮೇಲಿದ್ದರು. ಈ ವೇಳೆ ದಂಪತಿಗಳ ನಡುವೆ ಜಗಳವಾಗಿದ್ದು, ಪತ್ನಿಯನ್ನು ಬರ್ಬರವಾಗಿ ಕೊಂದ್ದಾನೆ. ಈ ವೇಳೆ ನೆರೆಹೊರೆಯವರು ಧಾವಿಸುತ್ತಿದ್ದಂತೆಯೇ ಲಾಲ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬರುವ ಮೊದಲೇ ಆಕ್ರೋಶಗೊಂಡ ಸ್ಥಳೀಯರು ಲಾಲ್ ಮನೆಗೆ ಬೆಂಕಿ ಹಚ್ಚಿದ್ದಾರೆ.
ಮೃತ ಮಹಿಳೆ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಆಕೆಯ ಮಗು ಸಹ ಆಕೆಯ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಚಂದರ್ ಕೊತ್ವಾಲ್ ತಿಳಿಸಿದ್ದಾರೆ.
BIGG NEWS : `ACB’ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಹೋಗಲ್ಲ : ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
Big news: ವೈದ್ಯಕೀಯ ತಪಾಸಣೆಗಾಗಿ ತಮ್ಮ ಮಕ್ಕಳೊಂದಿಗೆ ʻಸೋನಿಯಾ ಗಾಂಧಿʼ ವಿದೇಶ ಪ್ರವಾಸ: ಮೂಲಗಳು
ʼhttps://kannadanewsnow.com/kannada/fire-on-commercial-street-in-bengaluru-missed-tragedy-by-local-punctuality/