ಬೆಂಗಳೂರು : ಆಗಸ್ಟ್ 18 ರಂದು ,ಕೊಡಗು ಜಿಲ್ಲೆಗೆ ಮಳೆಹಾನಿ ವೀಕ್ಷಣೆಗೆ ಹೋಗಿದ್ದ ವೇಳೆ ಒಂದರೆಡು ಕಡೆ ಬಟ್ಟೆಯಲ್ಲಿ ಕಲ್ಲಿಟ್ಟು ಎಸೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆಗಸ್ಟ್ 18ರಂದು ಅತಿವೃಷ್ಟಿಯಿಂದಾದ ಹಾನಿ ವೀಕ್ಷಿಸುವುದಕ್ಕಾಗಿ ಕೊಡಗು ಜಿಲ್ಲೆಗೆ ಹೋಗಿದ್ದೆ, ತಿತಿಮತಿಯಲ್ಲಿ 15-20 ಜನ ಕಪ್ಪು ಬಾವುಟ ಪ್ರದರ್ಶಿಸಿದರು ಆದರೆ ಪೊಲೀಸರು ಏನೂ ಮಾಡದೇ ಸುಮ್ಮನೆ ನಿಂತಿದ್ದರು. ಅವರು ಕಪ್ಪು ಬಾವುಟ ಕಾರಿನಲ್ಲಿ ಹಾಕಲು ಬಂದ್ರೂ ಸುಮ್ಮನಿದ್ದರು. ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಇದ್ರೂ ಸರ್ಕಾರ ಏನೂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಡ್ಡೆಹೊಸಳ್ಳಿ ಬಳಿಯೂ 15-20 ಯುವಕರು ಪ್ರತಿಭಟನೆ ಮಾಡಿದ್ದಾರೆ. ಮೊದಲೇ ಪ್ರತಿಭಟನ ಮಾಡಿದಾಗ ಪೊಲೀಸರು ಎಚ್ಚೆತ್ತುಕೊಳ್ಳಲಿಲ್ಲ. ಎಸ್ ಪಿ ಸುಮ್ಮನೆ ನೋಡುತ್ತ ನಿಂತುಬಿಟ್ಟಿದ್ದಾನೆ. ಇಷ್ಟೆಲ್ಲಾ ಆಗಿದ್ದರೂ ಡಿಸಿ. ಪೊಲೀಸರು ಏನೂ ಕ್ರಮ ಕೈಗೊಳ್ಳಲಿಲ್ಲ. ಇಷ್ಟೆಲ್ಲಾ ನೋಡಿದ ಮೇಲೆ ಇದು ಸರ್ಕಾರದ ಪ್ರಾಯೋಜಿತ ಪ್ರತಿಭಟನೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿಭಟನೆ ವೇಳೆ ಒಂದೆರಡು ಕಡೆ ಬಟ್ಟೆಯಲ್ಲಿ ಕಲ್ಲಿಟ್ಟು ಎಸೆದಿದ್ದಾರೆ. ಅಲ್ಲಿದ್ದವರೆಲ್ಲ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರುಉ, ಸರ್ಕಾರವೇ ನಿರ್ದೇಶನವನ್ನು ನೀಡಿ ಪ್ರತಿಭಟನೆ ಮಾಡಿಸಿದೆ. ಶಾಸಕರೂ ಕೂಡ ಕುಮ್ಮಕ್ಕು ನೀಡಿದ್ದಾರೆ. ಸಂಪತ್ ಎನ್ನುವವನು ನನ್ನ ಕಾರಿಗೆ ಮೊಟ್ಟೆ ಎಸೆದಿದ್ದ. ಸಂಪತ್ ನನ್ನು ಶಾಸಕ ಅಪ್ಪಚ್ಚು ರಂಜನ್ ಬಿಡಿಸಕೊಂಡು ಬಂದಿದ್ದಾರೆ ಕಿಡಿಕಾರಿದ್ದಾರೆ.