ಮುಂಬೈ: ಪತಿಯೊಬ್ಬ ಮಲಗಿದ್ದ ಪತ್ನಿಯನ್ನು ಎಬ್ಬಿಸಿ ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ತಳ್ಳಿದ್ದು, ಬಳಿಕ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಅಲ್ಲಿಂದ ಎಸ್ಕೇಪ್ ಆಗಿರುವ ಘಟನೆ ಮಹಾರಾಷ್ಟ್ರದ ವಸಾಯಿ ರೈಲು ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.
ಹಿಂದಿಯಲ್ಲಿ ಮಾತನಾಡುತ್ತಿದ್ದ ದಂಪತಿ ಭಾನುವಾರ ಬೆಳಗ್ಗೆಯಿಂದ ವಸಾಯಿ ರಸ್ತೆ ನಿಲ್ದಾಣದಲ್ಲಿ ಅಡ್ಡಾಡುತ್ತಿರುವುದು ಕಂಡುಬಂದಿದೆ ಎಂದು ವಸಾಯಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ, ದಂಪತಿಗಳು ಜಗಳವಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆ ಕ್ಲೀನರ್ನ ಸೆಲ್ಫೋನ್ ಅನ್ನು ಎರವಲು ಪಡೆದು ನಂಬರ್ವೊಂದಕ್ಕೆ ಡಯಲ್ ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಇದೀಗ ಮಹಿಳೆ ಕರೆ ಮಾಡಿದ್ದ ನಂಬರ್ನ ವಿವರಗಳನ್ನು ಪೊಲೀಸರು ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
CCTVಯಲ್ಲಿ ಸೆರೆಹಿಡಿದ ಭಯಾನಕ ಘಟನೆಯು 20 ರ ಹರೆಯದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ಲಾಟ್ಫಾರ್ಮ್ ಸಂಖ್ಯೆ 5 ನಲ್ಲಿ ಮಲಗಿರುವುದನ್ನು ತೋರಿಸುತ್ತದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆ ವ್ಯಕ್ತಿ ಪ್ಲಾಟ್ಫಾರ್ಮ್ನಲ್ಲಿ ನಿಂತು ರೈಲಿನ ದಿಕ್ಕಿನತ್ತ ನೋಡುತ್ತಿರುವುದು ಕಂಡುಬಂದಿದೆ. ಅವನು ದೂರದಲ್ಲಿ ರೈಲನ್ನು ನೋಡಿದಾಗ, ಅವನು ತನ್ನ ಹೆಂಡತಿಯನ್ನು ಎಬ್ಬಿಸಿ, ಕೆಲವು ಹೆಜ್ಜೆ ಮುಂದೆ ಕರೆದುಕೊಂಡು ಬರುತ್ತಾನೆ. 4.10 ರ ಸುಮಾರಿಗೆ ಪ್ಲಾಟ್ಫಾರ್ಮ್ಗೆ ವೇಗವಾಗಿ ಬರತ್ತಿದ್ದ ಅವಧ್ ಎಕ್ಸ್ಪ್ರೆಸ್ ರೈಲಿನ ಮುಂದೆ ಅವಳನ್ನು ತಳ್ಳಿದ್ದಾನೆ. ನಂತ್ರ, ವ್ಯಕ್ತಿ ಮಲಗಿದ್ದ ಒಂದು ಮಗುವನ್ನು ಎತ್ತಿಕೊಂಡು ಮತ್ತೊಬ್ಬನನ್ನು ಕರೆದುಕೊಂಡು ಅಲ್ಲಿಂದ ಕಾಲ್ಕಿತ್ತಿರುವುದು ಸೆರೆಯಾಗಿದೆ.
#Mumbai: A man, in his 30s, threw his sleeping wife in front of a speeding long distance train at #Vasai railway station and fled with his two minor children on Monday morning. Search launched for him. pic.twitter.com/XRL2rOdQbt
— TOI Mumbai (@TOIMumbai) August 22, 2022
ದಂಪತಿಗಳ ಹೆಸರು ಪತ್ತೆಯಾಗದಿದ್ದರೂ ಆರೋಪಿಗಳ ಚಲನವಲನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಿಆರ್ಪಿ ಡಬ್ಲ್ಯುಆರ್ನ ಡಿಸಿಪಿ ಸಂದೀಪ್ ಭಜಿಭಾಕ್ರೆ ತಿಳಿಸಿದ್ದಾರೆ. ದಾದರ್ವರೆಗೆ ರೈಲು ಹತ್ತಿ ಕಲ್ಯಾಣ್ವರೆಗೆ ಪ್ರಯಾಣಿಸುತ್ತಿರುವುದು ಕಂಡು ಬಂದಿದ್ದು, ಅಲ್ಲಿಂದ ಆಟೋದಲ್ಲಿ ತೆರಳಿದ್ದಾನೆ. ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಭಜಿಭಾಕೆ ಹೇಳಿದ್ದಾರೆ.
Job Alert : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
BREAKING NEWS : ಈಶ್ವರ ದೇವರ ಜಾತ್ರೆಯಲ್ಲಿ `ವಿ.ಡಿ. ಸಾವರ್ಕರ್’ ಫೋಟೋ ಮೆರವಣಿಗೆ