ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಆಗಸ್ಟ್ 25 ರಂದು ಪ್ರಕಟಿಸಲಿದೆ.
BIGG NEWS : ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದ 1,323 ಕಿರಿಯ ಸಹಾಯಕರ ನೇಮಕಾತಿಗೆ 2019-20 ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಿ 2021 ರ ಸೆ. 18 ಹಾಗೂ 19 ರಂದು ಪರೀಕ್ಷೆ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದ್ದು, ಆಗಸ್ಟ್ 25 ರಂದು ಅರ್ಹತಾ ಪಟ್ಟಿ ಪ್ರಕಟಿಸುವುದಾಗಿ ಕೆಪಿಎಸ್ ಸಿ ಕಾರ್ಯದರ್ಶಿ ಕಿಶೋರ್ ವಿಕಾಸ್ ಸುರಳ್ಕರ್ ತಿಳಿಸಿದ್ದಾರೆ.
ಇನ್ನು ಗ್ರೂಪ್ ಎ ಹುದ್ದೆಯಾದ 2019-20 ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ (ACF) ತಾತ್ಕಾಲಿಕ ಅರ್ಹತಾ ಪಟ್ಟಿ ನವೆಂಬರ್ 30 ರಂದು ಪ್ರಕಟವಾಗಲಿದೆ.