ಹೈದರಾಬಾದ್: ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಭಾನುವಾರ ಸಿಕಂದರಾಬಾದ್ನ ಶ್ರೀ ಉಜ್ಜೈನಿ ಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅವರ ಪಾದರಕ್ಷೆಗಳನ್ನು ಎತ್ತಿಕೊಟ್ಟಿದ್ದು, ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತೀವ್ರ ಟೀಕೆಗೆ ಕಾರಣವಾಗಿದೆ.
ಸಂಜಯ್ ಅವರ ಕ್ರಮಕ್ಕೆ ಪ್ರತಿಕ್ರಿಯಿಸಿದ ಟಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಗುಜರಾತ್ ಮತ್ತು ನವದೆಹಲಿಯ ನಾಯಕರ ಮುಂದೆ ತೆಲಂಗಾಣದ ಸ್ವಾಭಿಮಾನವನ್ನು ಅಡಮಾನ ಇಟ್ಟಿದ್ದಾರೆ ಎಂದು ಟ್ವೀಟ್ನಲ್ಲಿ ಟೀಕಿಸಿದ್ದಾರೆ. ಅಂತಹ ನಾಯಕರ ಕಾರ್ಯಗಳನ್ನು ತೆಲಂಗಾಣವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಂತಹ ನಾಯಕರ ಪ್ರಯತ್ನಗಳನ್ನು ತೆಲಂಗಾಣ ಸಮಾಜವು ವಿಫಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ವೀಡಿಯೊದಲ್ಲಿ, ಸಂಜಯ್ ಅವರು ದೇವಾಲಯದಿಂದ ಹೊರಬಂದ ನಂತರ ಶಾ ಅವರ ಪಾದರಕ್ಷೆಗಳನ್ನು ತರಾತುರಿಯಲ್ಲಿ ತೆಗೆದುಕೊಂಡು ಶಾ ಕಾಲಿಗೆ ಹಾಕಿಕೊಳ್ಳಲು ಅನುವು ಮಾಡಿಕೊಡುತ್ತಿರುವುದನ್ನು ನೋಡಬಹುದು.
గుజరాత్ నాయకులకు ఉరికి ఉరికి చెప్పులు తొడగడం
తెలంగాణ ఆత్మగౌరవమా ? ?#TelanganaPride@KTRTRS pic.twitter.com/5lp90MCRzw— krishanKTRS (@krishanKTRS) August 22, 2022
ಭಾನುವಾರ ಮಧ್ಯಾಹ್ನ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಶಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುನುಗೋಡಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಶಾ ನಗರಕ್ಕೆ ಬಂದಿದ್ದರು
Optical illusion: ನಿಮಗೊಂದು ಸವಾಲ್: ಈ ನಾಯಿಯ ಮುಖದ ಚಿತ್ರದೊಳಗೆ ಇದೆ ಮಾನವನ ಮುಖ… ಕಂಡುಹಿಡಿಯಿರಿ!