ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಸೇನೆ ಎಂದರೆ ಸಾಕು ದೇಶದ ಜನರಿಗೆ ಅಪಾರ ಗೌರವ ಅಭಿಮಾನ..ಇದನ್ನೆ ಬಂಡವಾಳ ಮಾಡಿಕೊಂಡ ಚಾಮರಾಜನಗರ ಜಿಲ್ಲಾ ಪೊಲೀಸ್ ಆಡಳಿತ ಪ್ರಯಾಣಿಕರ ಬಳಿ ಸುಲಿಗೆಗೆ ನಿಂತಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ಆರ್ಮಿಯ ಸ್ಟ್ಯಾಪ್ ಮಾರಾಟ ಮಾಡಲು ಠಾಣೆಗಿಷ್ಟು ಅಂತ ನೀಡಲಾಗಿದೆ. ಅದನ್ನ ಪಡೆದ ಠಾಣೆಯ ಇನ್ಸ್ ಪೆಕ್ಟರ್ ತಮ್ಮ ಅದೀನ ಸಿಬ್ಬಂದಿಗಳಿಗೆ ಮಾರಾಟ ಮಾಡಲು ಒಪ್ಪಿಸಿಬಿಡುತ್ತಾರೆ.
ಸ್ಟ್ಯಾಪ್ ಪಡೆದ ಎಎಸ್ಐ ಹಾಗೂ ಪೇದೆಯೊಬ್ಬ ಬರುವ ವಾಹನಗಳನ್ನ ತಡೆದು ಇದು ಆರ್ಮಿ ಸ್ಟಿಕ್ಕರ್ ಪಡೆಯಬೇಕು ಎಂದು ಪ್ರಯಾಣಿಕರಿಗೆ ಸಬೂಬು ಹೇಳುತ್ತಾನೆ…ಪ್ರಯಾಣಿಕರು ಸರ್ ಇದು ಮುಖಬೆಲೆ 10 ರೂ ಇದೆ ಎಂದರೆ 50ರೂ ಕೊಟ್ಟು ಪಡೆಯಲೇಬೇಕು ಎಂದು ಹೇಳುತ್ತಾರೆ..ಸರ್ ಆರ್ಮಿ ಗೆ ತಾನೆ ಬೆಲೆ ಇರೊವಷ್ಟು ಪಡೆಯಿರಿ..ಹೆಚ್ಚಾಗಿ 10 ರೂ ಬದಲು 50 ಪಡೆಯೋದೆಷ್ಟು ಸರಿ..ಇದು ಸೂಕ್ತವಲ್ಲ..ಸೈನಿಕರ ಹೆಸರು ಬಳಸಿ ಹೆಚ್ಚುವರಿ ವಸೂಲಿ ಯಾಕೆ ಮಾಡುತ್ತಿದ್ದೀರಾ…ನಿಮ್ ಠಾಣೆಯ ಇನ್ಸ್ ಪೆಕ್ಟರ್ ಅವರು ಹೇಳಿದ್ದಾರಾ ಎಂದರೆ ಹೌದು ಎಂದು ವಾಹನ ಸವಾರನೊಬ್ಬರಿಗೆ ಉತ್ತರ ನೀಡಿದ್ದಾರೆ.
ಇಷ್ಟಕ್ಕೆ ಬಿಡದ ವಾಹನ ಸವಾರ, ಯಾವ ಠಾಣೆ ,ಇನ್ಸ್ ಪೆಕ್ಟರ್ ಯಾರು ಎಂದಾಗ ರಾಮಾಪುರ ಠಾಣೆ ಇನ್ಸ್ ಪೆಕ್ಟರ್ ನಂಜುಂಡಸ್ವಾಮಿ ಅವರೆ ಹೇಳಿದಾರೆ..ಅಲ್ಲಾ ಸ್ವಾಮಿ…ಹೆಚ್ಚುವರಿ ತಗೊಳ್ಳಿ ಅಂತ ಎಸ್ಪಿ ಅವರೂ ಹೇಳಿದರಾ ಅಂದ್ರೆ ಹೌದು ಎಂದು ಉತ್ತರ ನೀಡಿದ್ದಾರೆ.
ತಪಾಸಣೆ ನೆಪದಲ್ಲಿ ಬರೊ ವಾಹನಗಳಿಗೆ ಕೈವೊಡ್ಡೊ ಪೊಲೀಸ್ ಪೇದೆಗೆ ಸಮವಸ್ತ್ರ ನೀತಿ ಉಲ್ಲಂಘಿಸಿದ್ದಾರೆ ಜೊತೆಗೆ ನೇಮ್ ಪ್ಲೇಟ್ ಧರಿಸದೆ ಕರ್ತವ್ಯ ಬೇಜವಬ್ದಾರಿತನ ಮೆರೆದಿದ್ದಾರೆ. ಒಟ್ಟಾರೆ ದೇಶ ಸೈನಿಕರ ಹೆಸರೇಳಿ ಒಂದೊಂದು ಮುಖಬೆಲೆಯ ಸ್ಟ್ಯಾಪ್ ಗೆ ಐದೈದು ಪಟ್ಟು ಹೆಚ್ಚು ಮಾರಾಟ ಮಾಡಿ ಚಾಮರಾಜನಗರ ಜಿಲ್ಲಾ ಪೊಲೀಸರು ಹಗಲುದರೋಡೆಗೆ ಇಳಿದಿರೋದು ನಾಚಿಗೇಡಿತನದ ಸಂಗತಿ.