ತುಮಕೂರು: ಮುಂಜಿಗೆ ಹೆದರಿ ಹಿಂದೂ ಧರ್ಮಕ್ಕೆ ಅರ್ಚಕರೊಬ್ಬರು ವಾಪಸ್ಸು ಬಂದಿರುವ ಘಟನೆ ತುಮಕೂರಿನ ಹಿರೇಹಳ್ಳಿಯಲ್ಲಿ ನಡೆದಿದೆ.
ಸಹೋದರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿ, ನನ್ನ ಸಾವಿನ ಬಳಿಕ ನನ್ನ ನೇರವಿಗೆ ಯಾರು ಬರೋದಿಲ್ಲ ಅಂತ ಹೇಳಿ ಹೀರೇಹಳ್ಳಿಯ ಓಂಕಾರೇಶ್ವರ ದೇವಸ್ಥಾನದ ಅರ್ಚಕ ಎಚ್. ಆರ್. ಚಂದ್ರಶೇಖರಯ್ಯ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು, ಆದರೆ ಮುಸ್ಲಿಂ ಸಂಪ್ರದಾಯದಲ್ಲಿ ಮುಂಜಿಯಾದವರಿಗೆ ಮಾತ್ರ ಅಂತ್ಯ ಸಂಸ್ಕಾರವನ್ನು ಮಾಡಲಾಗುತ್ತದೆ, ಹೀಗಾಗಿ ನಾನು ನನಗೆ ಸಕ್ಕರೆ ಖಾಯಿಲೆ ಇರುವ ಕಾರಣದಿಂದ ನಾನು ಸಹೋದರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿ ಹೇಳಿದ್ದಾರೆ.
ಮತಾಂತರ ಯತ್ನದ ಸುದ್ದಿ ಕೇಳಿ ಕೂಡಲೇ ಮಾಜಿ ಸಚಿವ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಹೀರೇಹಳ್ಳಿಯ ಓಂಕಾರೇಶ್ವರ ದೇವಸ್ಥಾನದ ಅರ್ಚಕ ಎಚ್. ಆರ್. ಚಂದ್ರಶೇಖರಯ್ಯ ಮನೆಗೆ ಆಗಮಿಸಿ ತಮ್ಮ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.