ಬೆಂಗಳೂರು: ಸಹಾಯ ಕೇಳಿ ಬಂದವಳನ್ನು ವೇಶ್ಯಾವಾಟಿಕೆಗೆ ದೂಡಿ ಆಕೆಯನ್ನು ಬಲವಂತವಾಗಿ ಇನ್ನೊಬ್ಬರಿಗೆ ಲೈಂಗಿಕವಾಗಿ ಸಹಕರಿಸುವಂತೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಂಡ್ಯ ಕೆ.ಆರ್.ಪೇಟೆ ತಾಲೂಕು ಮೂಲದ ಹೆಣ್ಣು ಮಗಳು ಬೆಂಗಳೂರಿಗೆ ಬಂದಿದ್ದ ವೇಳೆಯಲ್ಲಿ ಆಕೆಗೆ ಲಕ್ಷ್ಮೀ ಎನ್ನುವ ಮಹಿಳೆ ಪರಿಚಯವಾಗಿದ್ದಾಳೆ, ಈ ವೇಳೆಯಲ್ಲಿ ಆಕೆಯನ್ನು ನಂಬಿಸಿ, ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಕಿದ್ದಾಳೆ ಎನ್ನಲಾಗಿದೆ. ಈ ನಡುವೆ ಪೋಲಿಸರ ಪೊಲೀಸರ ವಿಚಾರಣೆ ವೇಳೆ, ಲಕ್ಷ್ಮೀ ಅಲಿಯಾಸ್ ಮಂಜುಳಾ ಮತ್ತು ಬ್ರಹ್ಮೇಂದ್ರ ರಾವಣ್ ಇತ್ತೀಚೆಗೆ ಒಬ್ಬ ರೌಡಿಶೀಟರ್ ಹಾಗೂ ಆತನ ನಾಲ್ವರು ಸಹಚರರಿಗೆ ಈಕೆಯನ್ನು ಒಪ್ಪಿಸಿ ಬಲವಂತವಾಗಿ ವೇಶ್ಯಾವಾಟಿಕೆ ಮಾಡಿದ್ದಾರೆ. ಎನ್ನಲಾಗಿದೆ, ಈ ವೇಳೆ ರೌಡಿ ಶೀಟರ್ ಹಾಗೂ ಆತನ ಸಹಚರರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.