ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿದ್ದ. ಆದರೆ ಅವರ ಹೇಳಿಕೆ ಷಡ್ಯಂತ್ರದಿಂದ ಕೂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದಾನೆ. ಅವರ ಹೇಳಿಕೆ ಷಡ್ಯಂತ್ರದಿಂದ ಕೂಡಿದೆ. ಸಂಪತ್ ಯಾರ ಜೊತೆಗೆ ಇದ್ದ ಅಂತ ಫೋಟೋ ದಾಖಲೆಗಳಿವೆ. ಆ ಶಾಸಕರೇ ಸಂಪತ್ ಗೆ ಜಾಮೀನು ಕೊಡಿಸಿದ್ದಾರೆ. ಬಿಜೆಪಿ, ಸಂಘಪರಿವಾರದಿಂದ ಯಾಮಾರಿಸಲು ಯತ್ನ ಎಂದು ಆರೋಪಿಸಿದ್ದಾರೆ.
ನಾನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ. ನಾನು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ನಾವು ಕೊಡಗಿನವರು ದನದ ಮಾಂಸ ತಿನ್ನುವುದಿಲ್ಲ. ಸಿದ್ದರಾಮಯ್ಯ ಇಂತಹ ಹೇಳಿಕೆಯಿಂದ ನನಗೆ ನೋವಾಗಿತ್ತು. ಹಿಂದೂ ವಿರೋಧಿ ಹೇಳಿಕೆಗಳಿಗೆ ಬೇಸತ್ತು ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದೇನೆ ಎಂದು ಸಂಪತ್ ಹೇಳಿದ್ದಾರೆ.