ವಿಜಯಪುರ: ನಿನ್ನೆ ರಾತ್ರಿ ಜಿಲ್ಲೆಯ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.2ರಷ್ಟು ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಮಾಹಿತಿ ನೀಡಿದ್ದಾರೆ.
BREAKING NEWS: ಜಮ್ಮುಕಾಶ್ಮೀರದ ಬಂಡಿಪೋರಾದಲ್ಲಿ ಭಯೋತ್ಪಾದಕನ ಬಂಧನ; ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ
ಆಗಸ್ಟ್ 19ರ ರಾತ್ರಿ 8.16ಕ್ಕೆ ಭೂಮಿ ಕಂಪಿಸಿದೆ ಎನ್ನಲಾಗುತ್ತಿದೆ. ಭಾರಿ ಶಬ್ಧ ಕೇಳಿ ಜನರು ಮನೆಯಿಂದ ಹೊರಗೆ ಬಂದಿದ್ದರು. ಕೆಲವರ ಮನೆಯ ಪಾತ್ರೆಗಳೆಲ್ಲ ಕಳೆಗೆ ಬಿದ್ದಿದೆ. ಜನರು ಭೂಕಂಪನದಿಂದ ಆತಂಕಗೊಂಡಿದ್ದರು.
ಜನರು ಭಯಗೊಳ್ಳಬಾರದು. ಇದು ಕಡಿಮೆ ತೀವ್ರತೆಯ ಭೂಕಂಪನವಾಗಿದೆ ಯಾವುದೇ ಸಮಸ್ಯೆ ಇಲ್ಲಾ. ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಮನವಿ ಮಾಡಿದ್ದಾರೆ.