ರಜೌರಿ : ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (LoC ) ಬಳಿ ಶನಿವಾರ ನೆಲಬಾಂಬ್ ಸ್ಫೋಟದಲ್ಲಿ ಸೇನಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಶೇರಾ ಸೆಕ್ಟರ್ನ ಮುಂಚೂಣಿ ಪ್ರದೇಶದಲ್ಲಿ ಸೈನಿಕರ ಗುಂಪು ಗಸ್ತು ತಿರುಗುತ್ತಿದ್ದಾಗ ನೆಲಬಾಂಬ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಸೈನಿಕನನ್ನ ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಒಳನುಸುಳುವಿಕೆ ತಡೆ ವ್ಯವಸ್ಥೆಯ ಭಾಗವಾಗಿ, ಮುಂಚೂಣಿ ಪ್ರದೇಶಗಳು ನೆಲಬಾಂಬ್ಗಳಿಂದ ಕೂಡಿದ್ದು, ಕೆಲವೊಮ್ಮೆ ಮಳೆಯಿಂದ ಕೊಚ್ಚಿ ಹೋಗುತ್ತವೆ, ಇದರಿಂದಾಗಿ ಇಂತಹ ರೀತಿಯ ಅಪಘಾತಗಳು ಸಂಭವಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.