ಕೆಎನ್ಎನ್ಡಿಜಿಟಲ್ ಡೆಸ್ಕ್ : ಶ್ರಾವಣ ಮಾಸದಲ್ಲಿ ಪ್ರತಿ ಮನೆಯೂ ದೇವಸ್ಥಾನದಂತಾಗುತ್ತೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ವಿಶೇಷ ಪೂಜೆಗಳಿಂದ ಮನೆಗಳಲ್ಲಿ ಹಬ್ಬದ ವಾತಾವರಣವಿದೆ. ಈ ಪುಣ್ಯ ಮಾಸದಲ್ಲಿ ಮಾಡುವ ಕೆಲವು ಪೂಜೆಗಳು ಬಹಳಷ್ಟು ಒಳ್ಳೆಯದನ್ನ ಮಾಡುತ್ತವೆ ಎಂದು ವಿದ್ವಾಂಸರು ಹೇಳುತ್ತಾರೆ. ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನ ಮನೆಯಲ್ಲಿ ನೆಟ್ಟರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ವಾಸ್ತು ಪ್ರಕಾರ, ಮನೆಯಲ್ಲಿ ಬೇರೆ ಗಿಡಗಳಿದ್ರೆ ಎಲ್ಲವೂ ಚೆನ್ನಾಗಿರುತ್ತದೆ. ಅವ್ರು ಮನೆಯಲ್ಲಿ ಮನಸ್ಸಿನ ಶಾಂತಿ ಮತ್ತು ಆರೋಗ್ಯ ಮತ್ತು ಸಂಪತ್ತನ್ನ ತರುತ್ವೆ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ನೆಡಬೇಕಾದ ಗಿಡಗಳ ಬಗ್ಗೆ ತಿಳಿಯೋಣ ಬನ್ನಿ.
ಜಮ್ಮಿ ಗಿಡ.!
ಮನೆಯಲ್ಲಿ ಜಮ್ಮಿ ಗಿಡ ನೆಟ್ಟರೆ ಶನಿದೇವನ ಕೃಪೆ ಸಿಗುತ್ತದೆ ಎನ್ನುತ್ತಾರೆ ಪಂಡಿತರು. ಈ ಗಿಡ ಮನೆಯಲ್ಲಿದ್ರೆ, ಎಲ್ಲವೂ ಶುಭವಾಗಲಿದೆ. ತುಳಸಿಯನ್ನ ಜಮ್ಮಿಯೊಂದಿಗೆ ನೆಟ್ಟರೆ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ.
ಬಾಳೆ ಗಿಡ..!
ನಿಮ್ಮ ಕಾಂಪೌಂಡ್ನ ಮುಖ್ಯ ಗೇಟ್ನ ಬಲಕ್ಕೆ ಬಾಳೆ ಗಿಡವನ್ನ ನೆಡಿ. ಈ ರೀತಿ ನೆಡುವುದರಿಂದ ಋಣಾತ್ಮಕತೆ ದೂರವಾಗುತ್ತದೆ ಮತ್ತು ಧನಾತ್ಮಕ ಫಲಿತಾಂಶ ಬರುತ್ತದೆ ಎನ್ನುತ್ತಾರೆ ವಾಸ್ತು ಪಂಡಿತರು.
ಉಮ್ಮೆಟ್ಟಾ ಗಿಡ..!
ಶಿವನಿಗೆ ಈ ಗಿಡ ಎಂದರೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಈ ಗಿಡವನ್ನು ಮನೆಯಲ್ಲಿಟ್ಟರೆ ತುಂಬಾ ಒಳ್ಳೆಯದು. ಶ್ರಾವಣ ಸೋಮವಾರದಂದು ಉಮ್ಮೆಟ್ಟಾ ಹೂವಿನಿಂದ ಶಿವನನ್ನ ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆ. ಈ ಹೂವುಗಳಲ್ಲಿ ಶಿವನು ನೆಲೆಸಿದ್ದಾನೆ ಎಂದು ನಂಬಲಾಗಿದೆ. ಭಾನುವಾರ ಅಥವಾ ಮಂಗಳವಾರ ಮನೆಯಲ್ಲಿ ಈ ಗಿಡವನ್ನು ನೆಡಿ.
ಚಂಪಾ ಗಿಡ..!
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಾಳೆ, ಚಂಪಾ ಗಿಡಗಳನ್ನ ನೆಟ್ಟರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಮತ್ತು ಹಣಕ್ಕೆ ಸಂಬಂಧಿಸಿದ ಲಾಭಗಳನ್ನ ಪಡೆಯಿರಿ. ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ಈ ಗಿಡವನ್ನ ನೆಡಿ. ಒಳ್ಳೆಯ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ಪಂಡಿತರು.