ಬೆಂಗಳೂರು : ಕಳೆದ 1 ವರ್ಷದಿಂದ ಒತ್ತಡದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಕಲಾವಿದರೂ ಅತ್ತುಕೊಂಡು ಕೆಲಸ ಮಾಡಿದ್ದಾರೆ. ಆದ್ರೆ, ಸೆಟ್ನಲ್ಲಿ ನಾನು ಯಾರಿಗೂ ಬೈದಿಲ್ಲ ಎಂದು ನಟ ಅನಿರುದ್ಧ್ ಹೇಳಿದ್ದಾರೆ.
ಜೊತೆ ಜೊತೆಯಲಿ ಸೀರಿಯಲ್ ಸೆಟ್ನಲ್ಲಿ ಗಲಾಟೆಗೆ ಮಾಡಲಾಗಿದೆ ಎಂದು ಆರೋಪಿ ಕಿರುತೆರೆಯಿಂದ 2 ವರ್ಷಗಳ ಕಾಲ ಅನಿರುದ್ಧ್ ದೂರವಿಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ ನಟ ಅನಿರುದ್ಧ್ ನಮ್ಮ ಮೇಲೆ ಬಂದಿರುವ ಎಲ್ಲ ಆರೋಪಗಳು ಸುಳ್ಳು ಎಂದಿದ್ದಾರೆ.
ನಟ ಅನಿರುದ್ಧ್ , “ನನ್ನ ವಿರುದ್ಧ ಇಷ್ಟೆಲ್ಲಾ ಆರೋಪಗಳನ್ನ ಮಾಡುತ್ತಾರಲ್ಲ. ಅವರು ತಮ್ಮ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳಲಿ. ನಾನು ನನ್ನ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳುತ್ತೇನೆ. ನಾನು ಹೋರಾಡಿದ್ದು ನನ್ನ ಪಾತ್ರಕ್ಕಾಗಿ ಮಾತ್ರ. ಧಾರಾವಾಹಿ ಆರಂಭಕ್ಕೂ ಮೊದಲೇ ನಾನು ಹೇಳಿದ್ದೇನೆ. ಹಿಂದಿನ ದಿನವೇ ನನಗೆ ಸ್ಕ್ರಿಪ್ಟ್ ಕಳಿಸಿ ಎಂದು ಹೇಳಿದ್ದೇನೆ. ಅಲ್ಲಿ ನಮ್ಮ ಉದ್ದೇಶ ಧಾರಾವಾಹಿ ಗೆಲ್ಲಬೇಕಿರೋದು” ಎಂದಿದ್ದಾರೆ.
ಇನ್ನು “ಕಳೆದ 1 ವರ್ಷದಿಂದ ಒತ್ತಡದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಕಲಾವಿದರೂ ಅತ್ತುಕೊಂಡು ಕೆಲಸ ಮಾಡಿದ್ದಾರೆ. ನನ್ನಿಂದ ಎಷ್ಟೋ ಸೀನ್ಗಳು ಅದ್ಭುತವಾಗಿ ಮೂಡಿಬಂದಿವೆ. ಬಂದಿಲ್ಲ ಎಂದು ಅವರ ಮಕ್ಕಳ ಮೇಲೆ ಅಣೆ ಮಾಡಲಿ. ಅವ್ರು ಹೇಳಿದ ಸಮಯಕ್ಕೆ ಬಂದಿದ್ದೇನೆ, ಹೋಗಿದ್ದೇನೆ. ಜೆಎಸ್ ಪ್ರೊಡಕ್ಷನ್ನಿಂದ ಒಂದು ಹನಿ ಕುಡಿದಿಲ್ಲ. 3 ವರ್ಷದಿಂದ ಪ್ರೊಡಕ್ಷನ್ನಿಂದ ಹನಿ ನೀರು ಕುಡಿದಿಲ್ಲ. ಇದು ದುರಂತ” ಎಂದು ಸೀರಿಯಲ್ ನಟ ಅನಿರುದ್ಧ್ ಹೇಳದ್ದಾರೆ.
ಇನ್ನು “ನಾನು ಯಾವುದೇ ರೀತಿಯ ಡಿಮ್ಯಾಂಡ್ ಮಾಡುತ್ತಿರಲಿಲ್ಲ. ಹೊರಗಡೆ ಹೋದಾಗ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೆ ಸುಳ್ಳು ಹೇಳುವ ಅಗತ್ಯ ಇಲ್ಲ. ಇನ್ನು ಸೆಟ್ನಲ್ಲಿ ನಾನು ಯಾರಿಗೂ ಬೈದಿಲ್ಲ. ಸೆಟ್ನಲ್ಲಿ ಮೂರ್ಖರಂತೆ ಕೆಸಲ ಮಾಡಬಾರದು ಎಂದಿದ್ದೆ ಅಷ್ಟೇ” ಎಂದು ಹೇಳಿದ್ದಾರೆ.