ಕೆಎನ್ ಎನ್ ನ್ಯೂಸ್ ಡೆಸ್ಕ್ : ಕೆಲವರಿಗೆ ಕುಡಿದು ಚಟವಾಗಿರುತ್ತದೆ. ಅದನ್ನ ಬಿಡಲಾರೆ ತಮ್ಮ ಆರೋಗ್ಯವನ್ನ ಬಹಳ ಬೇಗ ಹಾಳುಮಾಡಿಕೊಳ್ಳತ್ತಾರೆ. ಈ ಕುಡಿತದಿಂದ ಆದೆಷ್ಟು ಸಂಸಾರ ಜೀವನ ಕೂಡ ಹಾಳಾಗಿದೆ. ದಿನ ಸಂಜೆ ಆದ್ರೆ ಸಾಕು ಎಣ್ಣೆ ಅಂಗಡಿ ಮುಂದೆ ಕ್ಯೂ ನಿಂತಿರುತ್ತಾರೆ. ಆದರೆ ಇನ್ನೂ ಕೆಲವರು ರೂಢಿಸಿಕೊಂಡಿರುವ ಚಟವನ್ನು ಹೇಗೆ ಬಿಡಬೇಕು. ಒಂದು ವೇಳೆ ಬಿಟ್ಟರೆ ಮುಂದೆ ಏನಾದ್ರು ಜೀವನಕ್ಕೆ ಹಾನಿಯಾಗುತ್ತದೆಯೋ ಎಂಬ ಗೊಂದಲ ಮೂಡಿರುತ್ತದೆ. ಇದಕ್ಕೆ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ಮದ್ಯಪಾನ ಮಾಡುವುದರಿಂದ ಹಾನಿ ಮಾತ್ರವೇ ಹೊರತು ಯಾವುದೇ ಪ್ರಯೋಜನವಿಲ್ಲ ಎಂದು ಹಿರಿಯರು ಹೇಳುತ್ತಾರೆ. ಅದಕ್ಕಾಗಿಯೇ ಕೆಲವರು ತಮ್ಮ ಒತ್ತಡ ಅಥವಾ ಮನೆಯಲ್ಲಿನ ಆರೋಗ್ಯ ಪರಿಸ್ಥಿತಿಗಳಿಂದಾಗಿ ಮದ್ಯ ಸೇವನೆ ನಿಲ್ಲಿಸಲು ಯೋಚಿಸುತ್ತಾರೆ. ಇದ್ದಕ್ಕಿದ್ದಂತೆ ಇರುವ ಹವ್ಯಾಸವನ್ನು ತೊರೆಯುವುದು ಕಷ್ಟವೇ. ಒಂದು ವೇಳೆ ಮದ್ಯ ಸೇವನೆ ನಿಲ್ಲಿಸಿದರೆ ಏನಾಗುತ್ತದೆ ಗೊತ್ತಾ?
ಮದ್ಯಪಾನ ತ್ಯಜಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪ್ರಯೋಜನ ಎರಡನ್ನೂ ದೇಹಕ್ಕೆ ನೀಡುತ್ತದೆ. ಮೊದಲನೆಯದಾಗಿ, ನೀವು ಮದ್ಯ ಸಂಪೂರ್ಣವಾಗಿ ನಿಲ್ಲಿಸಲು ಬಯಸಿದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಒಂದೇ ಬಾರಿಗೆ ಮದ್ಯ ಸೇವನೆ ಸಂಪೂರ್ಣವಾಗಿ ನಿಲ್ಲಿಸುವುದು ದೇಹದಲ್ಲಿ ನಡುಕ, ಬೆವರುವಿಕೆ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಹೇಳಿದ್ದಾರೆ.
ದಿಢೀರ್ ಮದ್ಯ ಸೇವನೆ ನಿಲ್ಲಿಸಿದಾಗ ದೇಹದಲ್ಲಿ ಕಂಡುಬರುವ ರೋಗಲಕ್ಷಣಗಳು
*ಖಿನ್ನತ
*ಆಯಾಸ
*ಕಿರಿಕಿರಿ
*ಕೋಪ
*ತಲೆನೋವು
*ನಿದ್ರಾಹೀನತೆ
ಕುಡಿಯುವುದನ್ನು ನಿಲ್ಲಿಸಲು ನಿರ್ಧರಿಸುವ ಮೊದಲು, ನೀವು ಮಾನಸಿಕವಾಗಿ ಸಿದ್ಧರಾಗಬೇಕುಬೇಕು. ಆಗ ಮಾತ್ರ ಉದ್ಭವಿಸುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.