ಚಂಡೀಗಢ: ಚಂಡೀಗಢದ ನಿವಾಸಿ ಮಹಿಳೆಯೊಬ್ಬರನ್ನು ಉದ್ಯೋಗ ಸಂದರ್ಶನಕ್ಕೆಂದು ಹೋಟೆಲ್ಗೆ ಕರೆಸಿದ್ದು, ನಂತ್ರ ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಪತಿಯಿಂದ ಬೇರ್ಪಟ್ಟು ಚಂಡೀಗಢದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ವಾಸವಿದ್ದ ಮಹಿಳೆ ಈ ಬಗ್ಗೆ ಧಕೋಲಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯು ಅರೆಕಾಲಿಕ ಕೆಲಸವನ್ನು ಹೊಂದಿದ್ದು, ತನ್ನ ಪ್ರದೇಶದಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ಸಹ ನಡೆಸುತ್ತಿದ್ದಳು. ಇತ್ತೀಚೆಗಷ್ಟೇ ಪ್ರಮೋದ್ ಕುಮಾರ್ ಎಂಬ ವ್ಯಕ್ತಿ ಆಕೆಗೆ ಉತ್ತಮ ಸಂಬಳದ ಕೆಲಸ ಕೊಡಿಸಿದ್ದು, ಆಗಸ್ಟ್ 16ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನಕ್ಕೆ ಜಿರಾಕ್ಪುರದ ಹೋಟೆಲ್ಗೆ ಬರುವಂತೆ ಹೇಳಿದ್ದಾನೆ.
ನಿಗದಿತ ಸಮಯಕ್ಕೆ ಹೋಟೆಲ್ನಲ್ಲಿ ಪ್ರಮೋದ್ನನ್ನು ಭೇಟಿಯಾಗಿದ್ದು, ಕೋಣೆಗೆ ಕರೆದೊಯ್ದು ಅಲ್ಲಿ ಉಪಹಾರ ನೀಡಿದರು. ಆಹಾರ ಮತ್ತು ತಂಪು ಪಾನೀಯ ಸೇವಿಸಿದ ನಂತರ ನನಗೆ ತಲೆತಿರುಗುವಿಕೆಯಾಯಿತು. ನಂತ್ರ, ಪ್ರಜ್ಞೆ ಬಂದಾಗ ಚಂಡೀಗಢದ ಧನಸ್ ಬಳಿಯ ರಸ್ತೆಯ ಮೇಲೆ ಮಲಗಿದ್ದೆ. ನಂತ್ರ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಅರಿತುಕೊಂಡೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಇದೀಗ ತನಿಖೆ ಮುಂದುವರೆಸಿದ್ದಾರೆ.