ಬೆಂಗಳೂರು: ಸಮರಸ ಜೀವನದ ಆರಂಭವೇ ಮದುವೆ .ಪ್ರತಿಯೊಬ್ಬರ ಜೀವನದ ಬಹುದೊಡ್ಡ ಘಟ್ಟ ಎಂದರೆ ಮದುವೆ. ಮದುವೆಗಾಗಿ ವಧು-ವರರಿಬ್ಬರು ನೂರಾರು ಕನಸ್ಸುಗಳನ್ನು ಕಾಣುವುದು ಸಹಜ..ಅಲಂಕಾರ, ಬಟ್ಟೆ, ಊಟ, ಆಭರಣ, ಫೋಟೋ… ಎಲ್ಲದರ ಬಗ್ಗೆಯೂ ವಿಶೇಷ ಕಾಳಜಿಯಿಂದ ಹೊಸತನಕ್ಕೆ ಆದ್ಯತೆ ನೀಡುತ್ತಾ ಆಯ್ಕೆ ಮಾಡುತ್ತಾರೆ.
BIGG NEWS: ʼರಾಜಕೀಯʼ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ನಟಿ ತ್ರಿಷಾ; ʼಕಾಂಗ್ರೆಸ್ʼ ಗೆ ಸೇರುವ ಸಾಧ್ಯತೆ
ಅಷ್ಟೇ ಅಲ್ಲದೇ ಆಮಂತ್ರಣ ಪತ್ರಿಕೆ ವಿನ್ಯಾಸದಲ್ಲೂ ಭಾರೀ ವಿಶೇಷವಾಗ ಆಯ್ಕೆಯನ್ನು ಮಾಡಲು ಮುಂದಾಗುತ್ತಾರೆ. ಅದರಲ್ಲೂಪಾಸ್ಪೋರ್ಟ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ದಿನಪತ್ರಿಕೆ, ಟಿವಿ ಜಾಹೀರಾತು, ಪರಿಸರ ಕಾಳಜಿ, ಮೊಬೈಲ್ ಅಪ್ಲಿಕೇಷನ್ ಮಾದರಿ, ಲ್ಯಾಪ್ಟಾಪ್ ಮದರಿಯ ಕಾರ್ಡ್ ರೇಹವಾರಿ ರೀತಿಯ ಆಮಂತ್ರಣ ಪತ್ರಿಕೆಗಳು ಚಾಲ್ತಿಯಲ್ಲಿವೆ . ಆದರೆ ತಮಿಳನಾಡಿನಲ್ಲಿ ವಧು-ವರರಿಬ್ಬರು ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ರಚಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ
ವರ ಫಾರ್ಮಾಸಿಸ್ಟ್, ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದು ಅವರು ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ತಯಾರಿಸಿದ್ದಾರೆ. ಅರೇ ..ಹಾಗಾದ್ರೆ ಅಷ್ಟೋಂದು ಸಣ್ಣ ಮಾತ್ರೆ ಕಾರ್ಡ್ನಲ್ಲಿ ಏನಿದೆ ಗೊತ್ತಾ?
ವರನ ಹೆಸರು ಎಜಿಲರಸನ್. ವಧುವಿ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಜಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ.
BIGG NEWS: ʼರಾಜಕೀಯʼ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ನಟಿ ತ್ರಿಷಾ; ʼಕಾಂಗ್ರೆಸ್ʼ ಗೆ ಸೇರುವ ಸಾಧ್ಯತೆ
ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಇದೆ.
ಟ್ಯಾಬ್ಲೆಟ್ ಕಾರ್ಡ್ಗಳಲ್ಲಿ ಸೂಚಿಸುವ ವಾರ್ನಿಂಗ್ ಸ್ಥಳದಲ್ಲಿ ‘ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭ ಕಾರ್ಯಕ್ರಮಕ್ಕೆ ಮಿಸ್ ಮಾಡದೆ ಬನ್ನಿ’ ಎಂದು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಇನ್ನು ತಮ್ಮ ಮದ್ವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದಾರೆ. ಅಂದು ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಿದೆ. ಮದ್ವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ.
BIGG NEWS: ʼರಾಜಕೀಯʼ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ನಟಿ ತ್ರಿಷಾ; ʼಕಾಂಗ್ರೆಸ್ʼ ಗೆ ಸೇರುವ ಸಾಧ್ಯತೆ
ಮಾತ್ರೆ ಶೀಟ್ ಮಾದರಿಯ ಈ ಮದ್ವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಗ ಕ್ರಿಯೆಟಿವಿಗೆ ಶ್ಲಾಘನೆ ವ್ಯಕ್ತಪಡಿಸುವ ಮೂಲಕ ಶುಭ ಕೋರುತ್ತಿದ್ದಾರೆ.