ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಥಿಯೋಪಿಯನ್ ಏರ್ಲೈನ್ಸ್ನ ಇಬ್ಬರು ಪೈಲಟ್ಗಳು ಸುಡಾನ್ನ ಖಾರ್ಟೂಮ್ನಿಂದ ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಾಬಾಗೆ ಹಾರಾಟ ನಡೆಸುತ್ತಿದ್ದಾಗ ನಿದ್ರೆಗೆ ಜಾರಿದ್ದು, ಕೆಲ ಕಾಲ ವಿಮಾನ ಆಕಾಶದಲ್ಲೇ ಹಾರಾಟ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ಏವಿಯೇಷನ್ ಹೆರಾಲ್ಡ್ ಪ್ರಕಾರ, ವಿಮಾನ ಇಟಿ343 ವಿಮಾನ ನಿಲ್ದಾಣವನ್ನು ಸಮೀಪಿಸಿದರೂ ಲ್ಯಾಂಡ್ ಆಗಲಿಲ್ಲ. ಈ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆಯನ್ನೂ ಸಹ ನೀಡಿತು. ಆದರೂ ಇಬ್ಬರು ಪೈಲಟ್ಗಳು ಆಗಸದಲ್ಲಿ ಸುಖನಿದ್ರೆಗೆ ಜಾರಿದ ಪರಿಣಾಮ ಬೋಯಿಂಗ್ 737 ಆಟೋಪೈಲಟ್ ವ್ಯವಸ್ಥೆಯು ವಿಮಾನವನ್ನು ಸುಮಾರು 37,000 ಅಡಿ ಎತ್ತರದಲ್ಲಿ ಹಾರುವಂತೆ ಮಾಡಿತು.
ಬಳಿಕ ವಿಮಾನವು ತನ್ನ ಮುಂದಿನ ಹಾರಾಟಕ್ಕೆ ಹೊರಡುವ ಮುನ್ನ ಸುಮಾರು ಎರಡೂವರೆ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಇತ್ತು ಎಂದು ಅದು ಹೇಳಿದೆ.
ಪೈಲಟ್ಗಳನ್ನು ಸಂಪರ್ಕಿಸಲು ಎಟಿಸಿ ಹಲವು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ವಿಮಾನವು ಲ್ಯಾಂಡ್ ಆಗಬೇಕಿದ್ದ ರನ್ವೇಯನ್ನು ದಾಟಿ ಮುಂದೆ ಆಟೊಪೈಲಟ್ ಸಂಪರ್ಕ ಕಡಿತಗೊಂಡಿತು. ಕೂಡಲೇ ಅದು ಎಚ್ಚರಿಕೆ ಗಂಟೆ ಮೊಳಗಿಸಿದ್ದರಿಂದ ಪೈಲಟ್ಗಳು ಎಚ್ಚರಗೊಂಡಿದ್ದಾರೆ. ನಂತರ ಅವರು 25 ನಿಮಿಷಗಳ ನಂತರ ರನ್ವೇಯಲ್ಲಿ ವಿಮಾನವನ್ನು ಇಳಿಸಿದ್ದಾರೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ, ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು.
Big news: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ದಾಳಿ ಬೆನ್ನಲ್ಲೇ 12 IAS ಅಧಿಕಾರಿಗಳ ವರ್ಗಾವಣೆ
Breaking news: ಡೆಹ್ರಾಡೂನ್ನಲ್ಲಿ ಮೇಘಸ್ಫೋಟ: ಸ್ಥಳಕ್ಕೆ ದೌಡಾಯಿಸಿದ SDRF ತಂಡ, ಹಲವರ ರಕ್ಷಣೆ