ಕೆಎನ್ಎನ್ ಡಿಜಿಟಲ್ ಡೆಸ್ಕ್ : ರೋಗವಿಲ್ಲ ಬದುಕಬೇಕು ಅನ್ನೋರು ಈಗಿನ ಕಾಲದ ಜನರು ಹೇಳುವವರೇ ಜಾಸ್ತಿಯಾಗಿದ್ದಾರೆ. ಅದಕ್ಕಾಗಿಉತ್ತಮವಾದ ಆಹಾರ ಪದ್ಧತಿಯನ್ನು ಹೊಂದಬೇಕು ಎನ್ನುವವರಿಗೆ ರಾಗಿ ಬೆಸ್ಟ್. ಈಗ ಗೊಂದಲ ಬಂದಿರುವುದು ಸಕ್ಕರೆ ಕಾಯಿಲೆ ಇರುವವರಿಗೆ. ನಾವು ಕೂಡ ರಾಗಿ ತಿನ್ನಬಹುದಾ ಎಂದು ವೈದ್ಯರು ಕೇಳಿದ್ರೆ ಏನು ಅಂತಾರೆ ಗೊತ್ತಾ ಇಲ್ಲಿದೆ ಓದಿ
ಸಕ್ಕರೆ ಕಾಯಿಲೆ ರಾಗಿ ಒಳ್ಳೆಯದೇ? ಆರೋಗ್ಯ ತಜ್ಞರು ಹೇಳುವುದೇನು ಇಲ್ಲಿದೆ ಮಾಹಿತಿ
ರಾಗಿ ಬಹಳ ಹಿಂದಿನ ಕಾಲದಿಂದ ಜನರ ಮನೆಮನೆಯ ಆಹಾರವಾಗಿದೆ. ಇದರಲ್ಲಿ ಗ್ಲೂಟನ್ ಇರುವುದಿಲ್ಲ. ಅದರಲ್ಲೂ ಕರ್ನಾಟಕದ ಮನೆ ಮಾತಾಗಿದೆ.
ಬಹಳಷ್ಟು ಜನರಿಗೆ ಇದೊಂದು ಪ್ರಶ್ನೆ ಕಾಡಬಹುದು. ಎಲ್ಲಾ ಸರಿ ಸಕ್ಕರೆ ಕಾಯಿಲೆ ಇರುವವರು ರಾಗಿ ತಿನ್ನಬಹುದಾ? ಇದರಿಂದ ಆರೋಗ್ಯಕ್ಕೆ ಏನು ತೊಂದರೆ ಇಲ್ಲವೇ? ಎಂದು ಕೇಳಬಹುದು.
ಆರೋಗ್ಯ ತಜ್ಞರು ಹೇಳುವ ಹಾಗೆ ಇದು ಪೌಷ್ಟಿಕಾಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಮತ್ತು ಕಾರ್ಬೊಹೈಡ್ರೇಟ್ ಅಂಶಗಳನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಯಾವುದೇ ಸಂಸ್ಕರಣೆಗೆ ಒಳಪಡಿಸದೆ ಜನರು ಇದನ್ನು ಸೇವನೆ ಮಾಡುತ್ತಾರೆ.
ಪ್ರಮುಖವಾಗಿ ಇದರಲ್ಲಿ ಪಾಲಿಫಿನಾಲ್ ಅಂಶಗಳು ಸಾಕಷ್ಟು ಕಂಡುಬರುತ್ತದೆ ಮತ್ತು ಕ್ಯಾಲ್ಸಿಯಂ ಜೊತೆಗೆ ಅಗತ್ಯವಾದ ಅಮೈನೋ ಆಮ್ಲಗಳು ಇದರಲ್ಲಿ ಹೆಚ್ಚಾಗಿವೆ. ಮಧುಮೇಹ ಸಮಸ್ಯೆ ಹೊಂದಿರುವಜನರಿಗೆ ಇದು ಪ್ರಯೋಜನಕಾರಿ.
ಸಕ್ಕರೆ ಕಾಯಿಲೆ ಇರುವವರು ರಾಗಿ ಅಥವಾ ಅದರಿಂದ ತಯಾರು ಮಾಡಿದ ಆಹಾರ ಪದಾರ್ಥ ಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳಲು ಅನುಕೂಲವಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಅಂಶಗಳು ಸಹ ಕಡಿಮೆಯಾಗುತ್ತದೆ.
ಮಧುಮೇಹ ಹೊಂದಿರುವ ಜನರಿಗೆ ರಾಗಿ ತುಂಬಾ ಒಳ್ಳೆಯದು. ಏಕೆಂದರೆ ಇದು ನಾರಿನ ಅಂಶವನ್ನು ಹೆಚ್ಚಾಗಿ ಒಳಗೊಂಡಿದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತದೆ.
ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವ ಜೊತೆಗೆ ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಕಾರಣದಿಂದ ತಿಂದ ತಕ್ಷಣ ರಕ್ತದಲ್ಲಿ ಇದರಿಂದ ಯಾವುದೇ ರೀತಿಯ ಸಕ್ಕರೆ ಪ್ರಮಾಣ ಏರಿಕೆ ಕಾಣುವುದಿಲ್ಲ.
ಇಷ್ಟೇ ಅಲ್ಲದೆ ಮಧುಮೇಹಿಗಳಿಗೆ ಮೂಳೆಗಳು ಸಹ ಗಟ್ಟಿ ಇರುವುದಿಲ್ಲ. ಕ್ರಮೇಣವಾಗಿ ದಿನಗಳೆದಂತೆ ಮೂಳೆಗಳು ದುರ್ಬಲವಾಗುತ್ತಾ ಹೋಗುತ್ತವೆ.
ಏಕೆಂದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುತ್ತದೆ ಮತ್ತು ಇದು ಮೂಳೆಗಳನ್ನು ಅಂದರೆ ಕ್ಯಾಲ್ಸಿಯಂ ಅಂಶವನ್ನು ಉಳಿಯಲು ಬಿಡುವುದಿಲ್ಲ. ಆದರೆ ರಾಗಿ ಖಾದ್ಯಗಳನ್ನು ಸೇವನೆ ಮಾಡುವು ದರಿಂದ ಮೂಳೆಗಳು ಬಲವಾಗುತ್ತವೆ ಮತ್ತು ದೀರ್ಘಕಾಲ ಆರೋಗ್ಯಕರವಾಗಿರುತ್ತವೆ.
ಎಷ್ಟು ಪ್ರಮಾಣದಲ್ಲಿ ರಾಗಿ ಸೇವನೆ ಮಾಡಬೇಕು?
ಮನುಷ್ಯನ ದೇಹಕ್ಕೆ 60% ಕಾರ್ಬೋಹೈಡ್ರೇಟ್ ಅಂಶದ ಅವಶ್ಯಕತೆಯನ್ನು ರಾಗಿ ಪೂರೈಸುತ್ತದೆ. ಗೋಧಿಯಂತೆ ರಾಗಿ ಕೂಡ ತುಂಬಾ ಒಳ್ಳೆಯದು.
ಹೀಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ರಾಗಿಯನ್ನು ಹಿಂದೆ ಮುಂದೆ ನೋಡದೆ ಬಳಸ ಬಹುದು. ಆದರೆ ಯಾವುದಕ್ಕೂ ಒಮ್ಮೆ ವೈದ್ಯರನ್ನು ಕೇಳಿ ಆನಂತರ ಮುಂದುವರೆಯುವುದು ಒಳ್ಳೆಯದು.