ಶಿವಮೊಗ್ಗ : ನಾಡಿನ ಪ್ರಸಿದ್ದ ಸಾಗರದ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 7-2023 ಮಂಗಳವಾರದಿಂದ ಶ್ರೀ ಮಾರಿಕಾಂಬ ಜಾತ್ರೆ ಆರಂಭಗೊಳ್ಳಲಿದೆ.
BIGG NEWS: ಲೈಂಗಿಕ ಕಿರುಕುಳ ಆರೋಪ: ಸಿವಿಕ್ ಚಂದ್ರನ್ ʼಜಾಮೀನುʼ ರದ್ದು ಕೋರಿದ ಕೇರಳ ಸರ್ಕಾರ
ಒಂಭತ್ತು ದಿನಗಳ ಕಾಲ ಈ ಜಾತ್ರೆ ನಡೆಯಲಿದೆ. ಇದು ವಿಶೇಷವಾಗಿ ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ ಬಲು ಅದ್ದೂರಿಯಿಂದ ಜರುಗುತ್ತದೆ. 27-12-22 ರಲ್ಲಿ ಮರ ಕಡಿಯುವ ದಿನ ಇರುತ್ತದೆ. 31-1-23 ರಂದು ಅಂಕಿ ಹಾಕುವ ದಿನಾಂಕವನ್ನ ನಿಗದಿ ಪಡಿಸಲಾಗಿದೆ. ಶಿವಮೊಗ್ಗ ಸೇರಿದಂತೆ ಸಾಗರದ ಸುತ್ತಮುತ್ತಲ ಪ್ರದೇಶಗಳಿಂದ ಜನಸಾಗರವೆ ಈ ಜಾತ್ರೆಗೆ ಹರಿದುಬಂದಿರುತ್ತದೆ.