ಬೆಂಗಳೂರು: ಓದು ಮುಂದುವರಿಸಿ ಎನ್ನುವುದು ಕ್ರೌರ್ಯ ಅಲ್ಲ ಅಂಥ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ಇದೇ ವೇಳೆ ನ್ಯಾಯಾಲಯ ಪತ್ನಿ ಹೂಡಿದ್ದ ವರದಕ್ಷಿಣೆ ಕಿರುಕುಳ ಕಾಯಿದೆಯಡಿ ಪತಿ ಹಾಗೂ ಆತನ ತಾಯಿ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿದೆ.
ಪ್ರಕರಣದ ಹಿನ್ನಲೆ: ನೀನು ಉನ್ನತ ಶಿಕ್ಷಣವನ್ನು ಮುಂದುವರಿಸು, ಜೊತೆಗೆ ಮಗುವಿನೊಂದಿಗೆ ಸಂವಹನ ನಡೆಸಲು ತಮಿಳು ತಮಿಳು ಭಾಷೆ ಕಲಿ ಅಂತ ಹೇಳಿದ್ದ ಗಂಡನ ವಿರುದ್ದ ದಾಖಲಾಗಿದ್ದ ದೂರಿನ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ, ಪತ್ನಿ ಹೂಡಿದ್ದ ವರದಕ್ಷಿಣೆ ಕಿರುಕುಳ ಕಾಯಿದೆಯಡಿ ಪತಿ ಹಾಗೂ ಆತನ ತಾಯಿ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿದೆ. ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿ ಆದೇಶ ನೀಡಿದೆ. ಪತಿ ಪತ್ನಿಗೆ ಹೆಚ್ಚಿನ ಜ್ಞಾನ ಸಂಪಾದನೆ ಮಾಡು ಮತ್ತು ಉನ್ನತ ವ್ಯಾಸಂಗ ಮುಂದುವರಿಸು ಹೇಳುವುದು, ಪತಿ, ಪತ್ನಿಗೆ ಶಿಕ್ಷಣ ಮುಂದುವರಿಸು, ಕೆಲಸಕ್ಕೆ ಸೇರಿಕೋ ಎಂದು ಹೇಳಿರುವುದು ಕೌರ್ಯವಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ಕೇಸ್ ರದ್ದುಗೊಳಿಸಿದೆ.