ಮಡಿಕೇರಿ: ಸರ್ಕಾರವೇ ಹಣ ಕೊಟ್ಟು ಜನರನ್ನ ಕರೆಸಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ “ಕೊಡಗಿನಲ್ಲಿ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಡಿ.ಸಿ ಕಚೇರಿ ತಡೆಗೋಡೆ ಕಳಪೆಯಾಗಿದೆ. ಇದೆಲ್ಲಾ ನನಗೆ ಗೊತ್ತಾಗಬಾರದು ಅಂತಾನೇ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರ ಸತ್ತಿದ್ದು, ಹಾಗಾಗಿ ಹಣ ಕೊಟ್ಟು ಜನರನ್ನ ಕರೆದುಕೊಂಡು ಬಂದು ಘೋಷಣೆ ಕೂಗಿಸಿದ್ದಾರೆ” ಎಂದು ತಿಳಿಸಿದರು.