ನವದೆಹಲಿ : ವಿಶ್ವದಲ್ಲಿ ಬಳಸಲಾಗುವ ಎಲ್ಲಾ ಲಸಿಕೆಗಳಲ್ಲಿ ಸುಮಾರು 60% ಭಾರತದಲ್ಲಿ ಉತ್ಪಾದಿಸಲಾಗುತ್ತದೆ, ಇದು ದೇಶವನ್ನ ಈ ವಲಯದಲ್ಲಿ ಪ್ರಶ್ನಾತೀತ ನಾಯಕನನ್ನಾಗಿ ಮಾಡುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
ಹೆಚ್ಚುವರಿ ವೆಚ್ಚ ಕಾರ್ಯದರ್ಶಿ ಸಜ್ಜನ್ ಸಿಂಗ್ ಯಾದವ್ ಅವರು ಬರೆದ ‘ಇಂಡಿಯಾಸ್ ವ್ಯಾಕ್ಸಿನ್ ಗ್ರೋಥ್ ಸ್ಟೋರಿ – ಫ್ರಂ ಕೌಪಾಕ್ಸ್ ಟು ವ್ಯಾಕ್ಸಿನ್ ಮೈತ್ರಿ’ ಪುಸ್ತಕವನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಿದ ನಿರ್ಮಲಾ ಸೀತಾರಾಮನ್, ಲಸಿಕೆಗಳ ವಿಕಾಸದ ಶತಮಾನಗಳ ಸುದೀರ್ಘ ಪ್ರಯಾಣವನ್ನು ಈ ಪುಸ್ತಕವು ಸೆರೆಹಿಡಿಯುತ್ತದೆ ಎಂದು ಹೇಳಿದರು.
“ದಶಕಗಳಲ್ಲಿ ಭಾರತವು ಗಮನಾರ್ಹ ಕೊಡುಗೆಯನ್ನ ನೀಡಿದೆ. ವಿಶ್ವದಲ್ಲಿ ಬಳಸಲಾಗುವ ಎಲ್ಲಾ ಲಸಿಕೆಗಳಲ್ಲಿ ಸುಮಾರು 60% ಭಾರತದಲ್ಲಿ ಉತ್ಪಾದಿಸಲಾಗುತ್ತದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತವು ಕೋವಿಡ್ ವಿರುದ್ಧ ಪ್ರತಿಯೊಬ್ಬ ನಾಗರಿಕನಿಗೂ ದುಪ್ಪಟ್ಟು ಡೋಸ್ ನೀಡುತ್ತಿದೆ ಎಂದು ಸಚಿವರು ಹೇಳಿದರು. ಇನ್ನು ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಡ್ರೈವ್ ಅಡಿಯಲ್ಲಿ ಭಾರತವು ಇಲ್ಲಿಯವರೆಗೆ 2.08 ಬಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನ ನೀಡಿದೆ.