ದಾವಣಗೆರೆ: ಜಿಲ್ಲೆಯಲ್ಲಿ ಯುವಕ ಹಾಗೂ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದಕ್ಕೂ ಮುನ್ನ ಯುವಕ ತನ್ನ ಗೆಳೆಯನಿಗೆ ಕರೆ ಮಾಡಿರುವ ಘಟನೆ ನಡೆದಿದೆ.
ಚರಣ್(23) ಹಾಗೂ ನಾಗರತ್ನ (21) ಎಂದು ಗುರುತಿಸಲಾಗಿದೆ. ತುಮಕೂರು ಮೂಲದ ಇವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಬೆಂಕಿಕೆರೆ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚರಣ್ ಈಗಾಗಲೇ ಮದುವೆಯಾಗಿದ್ದ ನಾಗರತ್ನಳ ಜೊತೆ ಸಂಬಂಧ ಇಟ್ಟುಕೊಂಡಿದ್ದನು. ಈ ವಿಚಾರ ನಾಗರತ್ನ ಪತಿಗೆ ಗೊತ್ತಾಗಿ ಎರಡೂ ಕುಟುಂಬದ ನಡುವೆ ಜಗಳವಾಗಿತ್ತು. ಅಲ್ಲದೆ ಪತಿ ಪ್ರಸನ್ನಕುಮಾರ್, ನಾಗರತ್ನ ಹಾಗೂ ಚರಣ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಯುವಕ ನಾಲ್ಕು ದಿನಗಳ ಹಿಂದೆ ಬೈಕ್ ನಲ್ಲಿ ಮನೆ ಬಿಟ್ಟು ಬಂದಿದ್ದ. ಹೀಗಾಗಿ ಆತ ಸ್ನೇಹಿತನಿಗೆ ಕರೆ ಮಾಡಿ, ನಾವು ಕೆರೆಗೆ ಹಾರುತ್ತಿದ್ದೇವೆ ಬೈಕ್ ತೆಗೆದುಕೊಂಡು ಹೋಗಲು ಹೇಳು ಎಂದು ಹೇಳಿದ್ದಾನೆ ಎನ್ನಲಾಗಿದೆ.