ಬೆಂಗಳೂರು: ಸಾಮಾನ್ಯವಾಗಿ ಬಂಗಾರ, ಬೆಳ್ಳಿ ಖರೀದಿಗೆ ಜನರು ಒಳ್ಳೆಯ ದಿನ ನೋಡುತ್ತಾರೆ. ಅದೇ ರೀತಿ ಶ್ರೀ ಕೃಷ್ಣ ಜನ್ಮಾಷ್ಟಮಿಯಾದ ಇಂದು ಮತ್ತು ನಾಳೆ ಚಿನ್ನ ಖರೀದಿಸಲು ಶುಭ ದಿನವಾಗಿದೆ. ಹೀಗಾಗಿ ಜನರು ಬಂಗಾರ ಖರೀದಿಗೆ ಮುಂದಾಗುತ್ತಾರೆ.ಸಂತೋಷದ ಸಂಗತಿಯೆಂದರೆ ಕಳೆದ ಎರಡು ದಿನಗಳಿಂದ ಚಿನ್ನದ ದರ ಇಳಿಮುಖವಾಗಿದೆ. ಇಂದು ಕೂಡ ಚಿನ್ನದ ದರದಲ್ಲಿ ಭಾರಿ ಇಳಿಮುಖ ಕಂಡಿದೆ.
ಕರ್ನಾಟಕ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.
ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 48,000 ರೂ. ಇತ್ತು. ಇಂದು 47,900 ರೂ. ಆಗಿದೆ. ಅಂದರೆ, ನಿನ್ನೆಯಿಂದ ನೂರು ರೂಪಾಯಿ ಕಡಿಮೆಯಾದಂತಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,360 ರೂ. ಇದ್ದುದು 52,250 ರೂ. ಆಗಿದೆ. ಒಟ್ಟಾರೆ, 22 ಮತ್ತು24 ಕ್ಯಾರೆಟ್ ಚಿನ್ನದ ದರಗಳಲ್ಲಿ ಇಳಿಮುಖ ಕಂಡಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳೋಣ.
ಚೆನ್ನೈ- 48,490 ರೂ. ಮುಂಬೈ- 47,900 ರೂಪಾಯಿ
ದೆಹಲಿ- 48,050 ರೂ, ಕೊಲ್ಕತ್ತಾ- 47,900 ರೂಪಾಯಿ
ಬೆಂಗಳೂರು- 47,950 ರೂಪಾಯಿ
ಹೈದರಾಬಾದ್- 47,900 ರೂ, ಕೇರಳ- 47,900 ರೂಪಾಯಿ
ಪುಣೆ- 47,930 ರೂ, ಮಂಗಳೂರು- 47,950 ರೂಪಾಯಿ
ಮೈಸೂರು- 47,950 ರೂಪಾಯಿ
ಇದೆ. ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ಇಂದು ಚಿನ್ನದ ದರ ಇಳಿಕೆ ಕಂಡಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿಸಬಹುದಾಗಿದೆ.
ಇನ್ನು ಬೆಳ್ಳಿ ದರಗಳೂ ಕಡಿಮೆಯಾಗಿದೆ. ಬೆಳ್ಳಿ ಬೆಲೆ ಇಂದು 200 ರೂ. ಕುಸಿತ ಕಂಡಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,800 ರೂ. ಇದ್ದುದು ಇಂದು 57,600 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರ ಈ ಮುಂದಿನಂತೆ ಇದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ- ಬೆಂಗಳೂರು- 63,300 ರೂ, ಮೈಸೂರು- 63,300 ರೂ., ಮಂಗಳೂರು- 63,300 ರೂ., ಮುಂಬೈ- 57,600 ರೂ, ಚೆನ್ನೈ- 63,300 ರೂ, ದೆಹಲಿ- 57,600 ರೂ, ಹೈದರಾಬಾದ್- 63,300 ರೂ, ಕೊಲ್ಕತ್ತಾ- 57,600 ರೂ. ಇದೆ.